thumbnail

By

Published : May 12, 2020, 9:58 AM IST

ETV Bharat / Videos

ಹಾವೇರಿ ಜಿಲ್ಲೆಯಲ್ಲಿ 3ನೇ ವ್ಯಕ್ತಿಗೆ ಸೋಂಕು.. ಅಂದಲಗಿ ಗ್ರಾಮ ಸೀಲ್​ಡೌನ್​​!!

ಶಿಗ್ಗಾಂವಿ ತಾಲೂಕಿನ ಅಂದಲಗಿ ಗ್ರಾಮದ 25 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ತಿಳಿಸಿದ್ದಾರೆ. ಈತನಿಗೆ ಪಿ-853 ಸಂಖ್ಯೆ ನೀಡಲಾಗಿದೆ. ಇವನ ಜೊತೆ ಇನ್ನೂ ನಾಲ್ವರು ಮುಂಬೈಗೆ ಹೋಗಿ ಬಂದಿದ್ದಾರೆ. ಈ ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದ 14 ಜನರನ್ನ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ದ್ವಿತೀಯ ಸಂಪರ್ಕ ಹೊಂದಿದ್ದ 23 ಜನರನ್ನ ಮನೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತನ ಗ್ರಾಮ ಅಂದಲಗಿಯನ್ನ ಸೀಲ್‌ಡೌನ್ ಮಾಡಲಾಗಿದೆ. ಗ್ರಾಮದ 5 ಕಿ.ಮಿ. ಸುತ್ತಳತೆಯಲ್ಲಿ ಬಫರ್ ಝೋನ್ ಎಂದು ಘೋಷಿಸಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.