ವರದಾ ನದಿ ನೀರಿನ ಪ್ರಮಾಣ ಹೆಚ್ಚಳ: ರಸ್ತೆ ಸಂಪರ್ಕ ಮತ್ತೆ ಕಡಿತಗೊಳ್ಳುವ ಸಾಧ್ಯತೆ - haveri latest news
🎬 Watch Now: Feature Video
ಹಾವೇರಿ ಜಿಲ್ಲೆಯಲ್ಲಿನ ವರದಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದೆ. ಕಳೆದ ಕೆಲವು ದಿನಗಳಿಂದ ಸಂಚಾರಕ್ಕೆ ಮುಕ್ತವಾಗಿದ್ದ ಹಾವೇರಿ ತಾಲೂಕಿನ ನಾಗನೂರು-ಕೂಡಲ ಗ್ರಾಮಗಳ ನಡುವಿನ ಸಂಪರ್ಕ ರಸ್ತೆ ಮತ್ತೆ ಕಡಿತಗೊಳ್ಳುವ ಸಾಧ್ಯತೆ ಇದೆ. ಎರಡೂ ಗ್ರಾಮಗಳ ನಡುವಿನ ಬ್ರಿಡ್ಜ್ ಮೇಲೆ ನೀರು ಹರಿಯುತ್ತಿದ್ದು, ಸಂಪರ್ಕ ಕಡಿತಗೊಳ್ಳಲಿದೆ. ಆದ್ರೂ ಕೆಲವು ಬೈಕ್ ಸವಾರರು ಈ ಸೇತುವೆ ಮೇಲೆ ಹರಿಯುತ್ತಿರುವ ನೀರನ್ನು ಲೆಕ್ಕಿಸದೇ ಬೈಕ್ ದಾಟಿಸಿಕೊಂಡು ಹೋಗುತ್ತಿದ್ದಾರೆ. ಇದು ಅಪಾಯಕ್ಕೆ ಆಹ್ವಾನ ನೀಡುವಂತಿದೆ.