ಲಾಕ್‌ಡೌನ್ ಸಡಿಲಿಕೆಯ ಎರಡನೇ ದಿನ ಸಹಜ ಸ್ಥಿತಿಗೆ ಮರಳಿದ ಹಾವೇರಿ - Haveri city has returned to normal
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7066285-963-7066285-1588661596491.jpg)
ಲಾಕ್ ಡೌನ್ ಸಡಿಲಿಕೆಯ ಎರಡನೇ ದಿನವಾದ ಇಂದು ಹಾವೇರಿ ನಗರ ಸಹಜ ಸ್ಥಿತಿಗೆ ಮರಳಿದೆ. ದಿನಸಿ ಅಂಗಡಿಗಳು, ಆಟೊಮೊಬೈಲ್ಸ್, ಎಲೆಕ್ಟ್ರಿಕಲ್ ಅಂಗಡಿಗಳು ಸೇರಿದಂತೆ ಬಹುತೇಕ ಅಂಗಡಿಗಳು ಓಪನ್ ಆಗಿದ್ದು, ಎಂದಿನಂತೆ ವ್ಯಾಪಾರ ವಹಿವಾಟಿನಲ್ಲಿ ತೊಡಗಿವೆ. ಜನರು ಸಹ ಎಂದಿನಂತೆ ಓಡಾಟ ಆರಂಭಿಸಿದ್ದಾರೆ. ಬೆರಳೆಣಿಕೆಯಷ್ಟು ಜನರನ್ನು ಹೊರತುಪಡಿಸಿದ್ರೆ ಬಹುತೇಕರು ಮಾಸ್ಕ್, ಹೆಲ್ಮೆಟ್ ಧರಿಸಿ ಓಡಾಡುತ್ತಿದ್ದಾರೆ. ಬೈಕ್‌ನಲ್ಲಿ ಒಬ್ಬೊಬ್ಬರೆ ಓಡಾಡಬೇಕು ಅನ್ನೋ ನಿಯಮವಿದ್ದರೂ, ಕೆಲವರು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಡಬಲ್ ರೈಡ್ ಮಾಡುತ್ತಿದ್ದಾರೆ. ಅಂಗಡಿಗಳಲ್ಲಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಅಂಗಡಿಯವರು ವ್ಯಾಪಾರ ವಹಿವಾಟು ನಡೆಸಿದ್ದಾರೆ.