ಹಾಸನಾಂಬೆ ದರ್ಶನಕ್ಕೆ ಜನಪ್ರತಿನಿಧಿಗಳು, ವಿಐಪಿಗಳಿಗೆ ಮಾತ್ರ ಅವಕಾಶ : ಭಕ್ತರ ಆಕ್ರೋಶ - Hasanambe temple
🎬 Watch Now: Feature Video
ನ.5ರಿಂದ ಅಧಿದೇವತೆ ಹಾಸನಾಂಬೆ ದೇವಾಲಯದ ಬಾಗಿಲನ್ನು ತೆರೆಯಲಾಗಿದೆ. ಆದರೆ, ಕೊರೊನಾ ಕಾರಣ ನೀಡಿ ಆಹ್ವಾನಿತ ಜನಪ್ರತಿನಿಧಿಗಳು, ವಿಐಪಿಗಳಿಗೆ ಮಾತ್ರ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಟ್ಟು, ಸಾಮಾನ್ಯ ಭಕ್ತರ ಪ್ರವೇಶ ನಿಷೇಧಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ನ.16ರವರೆಗೆ ಆಹ್ವಾನಿತ ಜನಪ್ರತಿನಿಧಿಗಳು ಮತ್ತು ವಿಐಪಿಗಳಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಆದರೆ, ಜನಸಾಮಾನ್ಯರಿಗೆ ದರ್ಶನ ನಿಷೇಧಿಸಲಾಗಿದೆ. ಸಾಮಾನ್ಯರಿಗೊಂದು, ರಾಜಕಾರಣಿಗಳಿಗೇ ಮತ್ತೊಂದು ಕಾನೂನು ಮಾಡಿರೋದು ಎಷ್ಟು ಸರಿ ಅಂತಾ ಭಕ್ತರು ಪ್ರಶ್ನಿಸ್ತಿದ್ದಾರೆ.