ಟಿಪ್ಪು ಆಡಳಿತ ದ್ವೀಪದಲ್ಲಿ ಹನುಮ ಜಪ: ಪಟ್ಟಣಕ್ಕೆ ಲಗ್ಗೆ ಇಟ್ಟ ಹನುಮ ಭಕ್ತರು - ಮಂಡ್ಯ ಹನುಮ ಮಾಲೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5341041-thumbnail-3x2-lek.jpg)
ಮಂಡ್ಯ: ದತ್ತಮಾಲೆ ರೀತಿಯಲ್ಲೇ ಸಕ್ಕರೆ ಜಿಲ್ಲೆಯಲ್ಲೂ ಶುರುವಾಗಿದೆ ಹನುಮ ಮಾಲೆ. ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳ ಶೋಭಾಯಾತ್ರೆಯನ್ನು ಅದ್ಧೂರಿಯಾಗಿ ಮಾಡಲಾಯಿತು. ಕಾವೇರಿ ನದಿ ತೀರಿದಲ್ಲಿ ಪ್ರತಿಷ್ಠಾಪನೆಗೊಂಡಿರುವ ಹನುಮ ದೇವಸ್ಥಾನದ ಬಳಿಯಿಂದ ರಂಗನಾಥಸ್ವಾಮಿ ದೇವಸ್ಥಾನದವರೆಗೂ ಸುಮಾರು 5 ಕಿಲೋ ಮೀಟರ್ ಯಾತ್ರೆಯನ್ನು ಭಕ್ತರು ಕೈಗೊಂಡರು. ರಾಜ್ಯದ ವಿವಿಧ ಮೂಲೆಗಳಿಂದ ಸುಮಾರು 6 ಸಾವಿರಕ್ಕೂ ಹೆಚ್ಚು ಭಕ್ತರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಯಾತ್ರೆ ಹಿನ್ನೆಲೆ ಜಿಲ್ಲಾ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಏರ್ಪಡಿಸಿತ್ತು. ಈ ವೇಳೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಯಿತು.