ಮತಗಟ್ಟೆಯಲ್ಲಿ ವ್ಹೀಲ್ಚೇರ್ ವ್ಯವಸ್ಥೆ ಇಲ್ಲದೇ ವಿಕಲಚೇತನನ ಪರದಾಟ - RR nagar by-election 2020
🎬 Watch Now: Feature Video
ಬೆಂಗಳೂರು: ರಾಜರಾಜೇಶ್ವರಿನಗರದ ಮೌಂಟ್ ಕಾರ್ಮೆಲ್ ಶಾಲೆಯ ಮತಗಟ್ಟೆ 344ರಲ್ಲಿ ವ್ಹೀಲ್ಚೇರ್ ಇಲ್ಲದ ಕಾರಣ ವಿಕಲಚೇತನರೊಬ್ಬರು ಉಪಚುನಾವಣೆಗೆ ಹಕ್ಕು ಚಲಾಯಿಸದೇ ವಾಪಸಾಗುತ್ತಿದ್ದರು. ಅಂಥೋನಿ ಜಾರ್ಜ್ ಎಂಬುವರು ಹಲವು ವರ್ಷಗಳಿಂದ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ಮತದಾನ ಮಾಡುತ್ತಿದ್ದರು. ಪ್ರತಿ ಬಾರಿ ಅವರಿಗೆ ವ್ಹೀಲ್ ಚೇರ್ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ, ಉಪಚುನಾವಣೆಯಲ್ಲಿ ವ್ಹೀಲ್ ಚೇರ್ ವ್ಯವಸ್ಥೆ ಮಾಡಿಲ್ಲ. ಆಗ ಅವರ ಪತ್ನಿ ಮಾತ್ರ ಮತದಾನ ಮಾಡಿದರು. ಅಂಥೋನಿ ವಾಪಸ್ ಮನೆಗೆ ತೆರಳುತ್ತಿದ್ದಾಗ ಎಚ್ಚೆತ್ತುಕೊಂಡ ಅಧಿಕಾರಿಗಳು ವ್ಹೀಲ್ ಚೇರ್ ತಂದು ಅಂಥೋನಿಗೆ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.