ಮೊಲಕ್ಕೆ ಬಂಗಾರದೋಲೆ ಚುಚ್ಚಿ ಕಾಡಿಗೆ ಬಿಡ್ತಾರೆ ಭಕ್ತರು.. ಕೋಟೆ ನಾಡ ಸಂಕ್ರಾಂತಿ ವೆರಿ ಡಿಫರೆಂಟ್ - rabbit ear piercing fair in Chitradurga,
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5730965-168-5730965-1579175273704.jpg)
ಕಾಡಿನ ಮೊಲ ಹಿಡಿದು ಅದರ ಕಿವಿಗೆ ಬಂಗಾರದ ಓಲೆ ತೊಡಿಸುವ ಮೂಲಕ ಸಂಕ್ರಾಂತಿ ಹಬ್ಬವನ್ನು ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಕಾಂಚೀಪುರ ಗ್ರಾಮದಲ್ಲಿ ವಿಶೇಷವಾಗಿ ಆಚರಿಸಲಾಯಿತು. ಇದು ಈ ಗ್ರಾಮದಲ್ಲಿ ವರ್ಷಂಪ್ರತಿ ನಡೆಸುವ ಪದ್ಧತಿ. ಈ ಬಾರಿಯೂ ಸಂಪ್ರದಾಯ ಮುಂದುವರೆಸಿರುವ ಗ್ರಾಮಸ್ಥರು ಬೇಟೆಯಾಡಿ ಹಿಡಿದ ಮೊಲವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾರೆ. ಬಳಿಕ ಕಂಚೀಪುರದ ವರದರಾಜಸ್ವಾಮಿ ದರ್ಶನ ಮಾಡಿಸಿದ್ದಾರೆ. ಇದಾದ ಬಳಿಕ ಮೊಲವನ್ನು ದೇವಸ್ಥಾನಕ್ಕೆ ತಂದು ಅದರ ಕಿವಿಗೆ ಬಂಗಾರದ ಓಲೆ ತೊಡಿಸಿ ವಿಶೇಷ ಪೂಜೆ ಸಲ್ಲಿಸಿ ಕಾಡಿಗೆ ಬಿಟ್ಟಿದ್ದಾರೆ. ಈ ಸಂಪ್ರದಾಯ ಮಾಡುವುದರಿಂದ ಮಳೆ, ಬೆಳೆ ಸುಭೀಕ್ಷವಾಗಿ ನಡೆದು ನಾಡಿಗೆ ಒಳಿತಾಗುತ್ತದೆ ಎಂಬುದು ಇಲ್ಲಿನ ಜನರ ಬಲವಾದ ನಂಬಿಕೆ. ಈ ಹಿಂದೆ ಗ್ರಾಮಸ್ಥರು ಮೊಲದ ಕಾಲಿಗೆ ಬೆಳ್ಳಿ ಗೆಜ್ಜೆ ಕಟ್ಟಿ ಕಾಡಿಗೆ ಬಿಡುತ್ತಿದ್ದರಂತೆ. ಈ ವರ್ಷ ಬಂಗಾರದ ಓಲೆ ಹಾಕಿ ಪೂಜೆ ಮಾಡಿದ ಬಳಿಕ ಮೊಲವನ್ನು ಕಾಡಿಗೆ ಬಿಡುವ ಮೂಲಕ ಸಂಪ್ರಾದಯವನ್ನು ಮುಂದುವರೆಸಿದರು.