ಮಹಾಶಿವರಾತ್ರಿ ಪ್ರಯುಕ್ತ ಭಕ್ತರಿಂದ 108 ಲಿಂಗದ ಮೂರ್ತಿಗಳಿಗೆ ಜಲಧಾರಣೆ - Bellary Gavisiddeshwara temple
🎬 Watch Now: Feature Video
ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಭಾಗದಲ್ಲಿರುವ ಗವಿಸಿದ್ದೇಶ್ವರ ದೇವಸ್ಥಾನಕ್ಕೆ ರಾಜ್ಯದ ಹಲವೆಡೆಯಿಂದ ಸಾವಿರಾರು ಭಕ್ತರು ಆಗಮಿಸಿ ಶಿವನ ಕೃಪೆಗೆ ಪಾತ್ರರಾದರು. ಭಕ್ತರು ಆಗಮಿಸಿ ಬೆಳಿಗ್ಗೆಯಿಂದಲೇ ಗವಿಸಿದ್ದೇಶ್ವರನಿಗೆ ಕಾಯಿ, ಕರ್ಪೂರ, ಎಡೆಯನ್ನು ನೀಡಿ, ದೀಪಬೆಳಗುವ ಮೂಲಕ ಭಗವಂತನ ಕೃಪೆಗೆ ಪಾತ್ರರಾದರು. ಭಕ್ತರು ಒಬ್ಬೊಬ್ಬರಾಗಿ 108 ಲಿಂಗದ ಮೂರ್ತಿಗಳಿಗೆ ಜಲಧಾರಣೆ ಮಾಡಿ ತಮ್ಮ ಇಷ್ಟಾರ್ಥಸಿದ್ಧಿಗಾಗಿ ಬೇಡಿಕೊಂಡರು.