ಗ್ರಾ.ಪಂ. ಚುನಾವಣೆ: ಗುಳೆ ಹೋದವರನ್ನು ಕರೆಸಿ ಮತ ಹಾಕಿಸಿದ ಅಭ್ಯರ್ಥಿಗಳು - Gram panchayath Election 2020
🎬 Watch Now: Feature Video
ಬಾಗಲಕೋಟೆ: ಜಿಲ್ಲೆಯಲ್ಲಿ ನಡೆಯುತ್ತಿರುವ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗುಳೆ ಹೋಗಿರುವ ಮತದಾರರನ್ನೂ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳು ಕರೆಯಿಸಿ ಮತದಾನ ಮಾಡಿಸುತ್ತಿದ್ದಾರೆ. ಬಾದಾಮಿ ತಾಲೂಕಿನಾದ್ಯಂತ ಮಂಗಳೂರು, ಕಾರವಾರ ಸೇರಿದಂತೆ ಇತರ ಪ್ರದೇಶಗಳಿಗೆ ದುಡಿಯಲು ಹೋಗಿರುವಂತಹ ಜನರನ್ನು ವಾಹನದ ಮೂಲಕ ಕರೆಯಿಸಿ, ಮತದಾನ ಮಾಡಿಸುತ್ತಿದ್ದಾರೆ. ಗುಳೇದಗುಡ್ಡ ತಾಲೂಕಿನ ತಿಮ್ಮಸಾಗರ ಗ್ರಾಮದಲ್ಲಿ ಸುಮಾರು 250 ಮತದಾರರನ್ನು ವಾಹನದ ಮೂಲಕ ಕರೆ ತಂದು ಮತದಾನ ಮಾಡಿಸಲಾಯಿತು.