ಸಿಬ್ಬಂದಿ ಮುಷ್ಕರ: ದಾವಣಗೆರೆಯಲ್ಲಿ ಕೆಎಸ್ಆರ್ಟಿಸಿ ಬಸ್ ಸಂಚಾರ ಸ್ತಬ್ಧ - transportation staffs strike in karnataka
🎬 Watch Now: Feature Video
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯದಲ್ಲಿ ಸಾರಿಗೆ ನೌಕರರು ಅನಿರ್ದಿಷ್ಟವಾಗಿ ಮುಷ್ಕರ ಹಮ್ಮಿಕೊಂಡಿದ್ದು, ದಾವಣಗೆರೆಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸಂಪೂರ್ಣವಾಗಿ ಖಾಲಿ-ಖಾಲಿಯಾಗಿದೆ. ಸರ್ಕಾರಿ ಬಸ್ಗಳು ಇಲ್ಲದೆ ಹಿನ್ನೆಲೆ ಬೆರಳೆಣಿಕೆಯಷ್ಟು ಪ್ರಯಾಣಿಕರು ಖಾಸಗಿ ಬಸ್ಗಳ ಮೊರೆ ಹೋಗುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸಾರಿಗೆ ಬಸ್ ಸಂಚಾರ ನಡೆಸೋದಿಲ್ಲ ಎಂದು ನೌಕರರ ಪಟ್ಟು ಹಿಡಿದಿದ್ದು, ದಾವಣಗೆರೆ ಡಿಪೋಗೆ ಸೇರಿದ 262 ಸಾಮಾನ್ಯ ಸಾರಿಗೆ ಬಸ್, 102 ವೇಗಧೂತ ಬಸ್ ಸೇರಿದಂತೆ 40 ನಗರ ಸಾರಿಗೆ ಬಸ್ಗಳು ರಸ್ತೆಗಿಳಿದಿಲ್ಲ. ಈ ಕುರಿತ ವಿಸ್ತೃತವಾದ ವರದಿ ಇಲ್ಲಿದೆ ನೋಡಿ.