ಸಮುದ್ರಪಾಲಾಗುತ್ತಿದ್ದ ಬಾಲಕಿಯ ರಕ್ಷಣೆ.. ವಿಡಿಯೋ ವೈರಲ್ - Ullal Mogveerapattana
🎬 Watch Now: Feature Video
ಮಂಗಳೂರು:ಉಳ್ಳಾಲದ ಮೊಗವೀರಪಟ್ಟಣದಲ್ಲಿ ಸಮುದ್ರ ಪಾಲಾಗುತ್ತಿದ್ದ ಬಾಲಕಿಯನ್ನು ಸ್ಥಳೀಯ ಜೀವರಕ್ಷಕ ಈಜುಗಾರ ಸಂಘದ ಸದಸ್ಯರು ರಕ್ಷಿಸಿದ್ದು ವಿಡಿಯೋ ವೈರಲ್ ಆಗಿದೆ. ಅಕ್ಟೋಬರ್ 7ರಂದು ಮುಡಿಪು ಪ್ರದೇಶದ ಕುಟುಂಬವೊಂದು ಸಮುದ್ರಕಿನಾರೆಗೆ ಬಂದಿತ್ತು. ಅಂದು ಸಂಜೆ ಇಬ್ಬರು ಮಕ್ಕಳೊಂದಿಗೆ ಆಟವಾಡುತ್ತಿದ್ದ 16 ವರ್ಷದ ಬಾಲಕಿ ನೀರು ಪಾಲಾಗಿದ್ದಳು. ಇದನ್ನು ಗಮನಿಸಿದ ಮೊಗವೀರಪಟ್ಟಣ ಜೀವರಕ್ಷಕ ತಂಡದ ಸದಸ್ಯರು ಸಮುದ್ರಪಾಲಾಗುತ್ತಿದ್ದ ಬಾಕಿಯನ್ನು ರಕ್ಷಿಸಿ ಆಕೆಗೆ ಸೂಕ್ತ ಚಿಕಿತ್ಸೆಯನ್ನು ನೀಡಿದ್ದಾರೆ.