ವ್ಯಾಪಕ ಮಳೆಯಿಂದ ಎರಡು ಬಾರಿ ಮುಂದೂಡಿದ್ದ ಗೂಳೂರು ಗಣೇಶ ನಿಮಜ್ಜನ - ಎರಡು ಬಾರಿ ಮುಂದೂಡಿದ್ದ ಗೂಳೂರು ಗಣೇಶ ನಿಮಜ್ಜನ
🎬 Watch Now: Feature Video

ತುಮಕೂರು: ಗಣೇಶ ನಿಮಜ್ಜನ ಆಗದೆ ಎರಡು ಬಾರಿ ಮುಂದೂಡಲ್ಪಟ್ಟಿದ್ದ ತುಮಕೂರು ತಾಲೂಕಿನ ಗೂಳೂರು ಗಣೇಶ ಮೂರ್ತಿಯನ್ನು ಗ್ರಾಮದ ಕೆರೆಯಲ್ಲಿ ವಿಸರ್ಜಿಸಲಾಯಿತು. ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆ ಹಾಗೂ ಗ್ರಾಮದಲ್ಲಿ ಮಳೆ ವ್ಯಾಪಕವಾಗಿ ಸುರಿದ ಹಿನ್ನೆಲೆಯಲ್ಲಿ ಎರಡು ಬಾರಿ ವಿಸರ್ಜನೆ ಕಾರ್ಯವನ್ನು ಮುಂದೂಡಲಾಗಿತ್ತು. ಜನವರಿ 23ರಂದು ಗ್ರಾಮದಲ್ಲಿ ಬೃಹತ್ ಗಣೇಶ ಮೂರ್ತಿಯನ್ನು ಅದ್ದೂರಿ ಮೆರವಣಿಗೆಯೊಂದಿಗೆ 18 ಕೋಮಿನ ಜನರು ಒಗ್ಗೂಡಿ ಗಣೇಶೋತ್ಸವವನ್ನು ಆಚರಿಸಿದರು. ಸಾವಿರಾರು ಭಕ್ತರು ಬಲಿಪಾಡ್ಯಮಿಯಂದು ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಿ ಒಂದು ತಿಂಗಳ ಕಾಲ ಪೂಜಿಸುವುದು ಗೂಳೂರು ಗ್ರಾಮದಲ್ಲಿ ವಾಡಿಕೆ.