thumbnail

ಕೆಂಪಾಗಿ ಹರಿಯುತ್ತಿರುವ ಗಂಗೆ, ಪ್ರಕೃತಿ ವಿಸ್ಮಯಕ್ಕೆ ಜನ ಬೆರಗು... ಏನಿದರ ಮರ್ಮ?

By

Published : Oct 22, 2019, 8:05 PM IST

Updated : Oct 22, 2019, 8:26 PM IST

ಉತ್ತರ ಕರ್ನಾಟಕದಲ್ಲಿ ಕಳೆದೆರೆಡು ದಿನಗಳಿಂದ ನಿರಂತರ ಧಾರಾಕಾರ ಮಳೆಗೆ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಆದರೆ, ವಿಚಿತ್ರ ಎನಿಸುವಂತೆ ಅಚ್ಚರಿಯೂ ಸಹ ಪ್ರವಾಹದ ನೀರು ಮೂಡಿ ಬಂದಿದೆ. ಗದಗ ಜಿಲ್ಲೆಯ ಕಪ್ಪತ್ತಗುಡ್ಡ ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆ ಹಳ್ಳ-ಕೊಳ್ಳ ಸೇರಿದಂತೆ ಬಾಂದಾರಗಳು ತುಂಬಿ ಹರಿಯುತ್ತಿವೆ.  ಹೀಗಾಗಿ ಕಪ್ಪತ್ತಗುಡ್ಡದ ದಡದಲ್ಲಿರುವ ಹಿರೇವಡ್ಡಟ್ಟಿ ಗ್ರಾಮದ ಸಮೀಪದ ಬಾಂದಾರನಲ್ಲಿ ಗಂಗೆ ಕೆಂಪಾಗಿ ಹರಿಯುತ್ತಿದ್ದಾಳೆ. ಇದಕ್ಕೆ ಕಾರಣ ಗಣಿಗಾರಿಕೆ. ಈ ಹಿಂದೆ ಗಣಿಗಾರಿಕೆಯಿಂದ ನಲುಗಿದ್ದ ಕಪ್ಪತ್ತಗುಡ್ಡ ಕೆಂಪು ಬಣ್ಣದ ಮಿಶ್ರಿತ ಮಣ್ಣನ್ನ ಒಳಗೊಂಡಿದೆ. ಹೀಗಾಗಿ ಮಳೆ ನೀರು ಪ್ರವಾಹ ರೀತಿಯಲ್ಲಿ ಹರಿದು ಬರುತ್ತಿದ್ದು, ಗಂಗೆ ಸಹ ಕೆಂಪಾಗಿ ಹರಿಯುತ್ತಿದ್ದಾಳೆ. ಈ ಅಚ್ಚರಿ ಕಂಡು ಸ್ಥಳೀಯರು ಈ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆ‌ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ವಿಡಿಯೋ ಸದ್ಯ ವೈರಲ್ ಆಗ್ತಿದ್ದು, ಪ್ರಕೃತಿಯ ವಿಸ್ಮಯಕ್ಕೆ ಜನರು ಬೆರಗಾಗಿದ್ದಾರೆ.
Last Updated : Oct 22, 2019, 8:26 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.