ಕೋವಿಡ್-19 ಆತಂಕದ ಮಧ್ಯೆ ಗದಗ ಜಿಲ್ಲೆಯ ಜನರಿಗೆ ಸಿಕ್ತು ಸಿಹಿ ಸುದ್ದಿ
🎬 Watch Now: Feature Video
ಗದಗ: ಜಿಲ್ಲೆಯಲ್ಲಿ ಕೊರೊನಾ ಆತಂಕ ಹೆಚ್ಚಿರುವ ಹಿನ್ನೆಲೆಯಲ್ಲಿ 175 ಜನರ ಮೇಲೆ ನಿಗಾವಹಿಸಲಾಗಿದ್ದು, ಈ ಕುರಿತಂತೆ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ನೀಡಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ 175 ಇದೆ. ಇದರಲ್ಲಿ 28 ದಿನಗಳ ನಿಗಾ ಅವಧಿ ಪೂರೈಸಿದವರು 11 ಜನ ಇದ್ದಾರೆ. ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿರುವವರು 161 ಜನ ಇದ್ದರೆ, ವೈದ್ಯಕೀಯ ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ 3 ಜನ ನಿಗಾದಲ್ಲಿದ್ದಾರೆ. ಇನ್ನು ಒಟ್ಟು 42 ಜನರ ರಕ್ತ ಪರೀಕ್ಷೆಯ ಮಾದರಿಗಳು ನಕಾರಾತ್ಮಕವಾಗಿವೆ ಎಂಬ ವರದಿ ಬಂದಿದ್ದು, ಯಾವುದೇ ರಕ್ತ ಮಾದರಿಗಳು ಬಾಕಿ ಇರುವುದಿಲ್ಲಾ. ಸದ್ಯಕ್ಕೆ ಜಿಲ್ಲೆಯಲ್ಲಿ ಯಾವುದೇ ಸೋಂಕಿತ ವ್ಯಕ್ತಿಗಳಿಲ್ಲ. ಜನರು ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಸಿಹಿ ಸುದ್ದಿಯನ್ನು ನೀಡಿದ್ದಾರೆ.