ಕೊಪ್ಪಳದಲ್ಲಿ ಸಂಸದರ ಬೆಂಬಲಿಗರಿಂದ ಬಡವರಿಗೆ ಆಹಾರ ಧಾನ್ಯದ ಕಿಟ್ ವಿತರಣೆ..! - ಕೊಪ್ಪಳದಲ್ಲಿ ಕೊರೊನಾ ಎಫೆಕ್ಟ್
🎬 Watch Now: Feature Video
ಕೊಪ್ಪಳ: ಕೊರೊನಾ ಭೀತಿ ಹಾಗೂ ಲಾಕ್ಡೌನ್ನಿಂದಾಗಿ ಬಡವರ ಬದುಕಿನ ಮೇಲೆ ವ್ಯತಿರಿಕ್ತ ಪರಿಮಾಣ ಬೀರಿದೆ. ಇದರಿಂದ ಜನರನ್ನ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಜನರಿಗೆ ಅನೇಕರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದು, ಸಂಸದ ಸಂಗಣ್ಣ ಕರಡಿ ವತಿಯಿಂದ ಬಡವರಿಗೆ ನೆರವು ನೀಡುತ್ತಿದ್ದಾರೆ. ಭಾಗ್ಯನಗರದಲ್ಲಿ ಬಡವರಿಗೆ ಆಹಾರಧಾನ್ಯ, ದಿನಸಿಗಳನ್ನೊಳಗೊಂಡ ಒಂದು ಸಾವಿರ ಕಿಟ್ಗಳನ್ನು ವಿತರಿಸಿ ಸಂಸದ ಸಂಗಣ್ಣ ಕರಡಿ ಬೆಂಬಲಿಗರು ಮಾನವೀಯತೆ ಮೆರೆದಿದ್ದಾರೆ.