'ಹಸಿದ ಹೊಟ್ಟೆ ತುಂಬಿಸುವ ಮೂಲಕ ಧೀಮಂತ ನಾಯಕನ ಹುಟ್ಟುಹಬ್ಬ ಆಚರಣೆ' - Adamya Chetana News
🎬 Watch Now: Feature Video
ಬೆಂಗಳೂರು : ಅಜಾತ ಶತ್ರು, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಅಂಗವಾಗಿ ಅದಮ್ಯ ಚೇತನ ವತಿಯಿಂದ ಅನ್ನ ದಾನ ಏರ್ಪಡಿಸಲಾಗಿತ್ತು. ಜಯನಗರದ ಜೈನ ಮಂದಿರದ ಬಳಿ ನೂರಾರು ಹಸಿದ ಜನರಿಗೆ ಆಹಾರ ನೀಡಲಾಯಿತು. ಇದರ ಜೊತೆಗೆ ಅನಂತ್ಕುಮಾರ್ ಪ್ರತಿಷ್ಠಾನದ ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ವಿರಚಿತ ಆಯ್ದ ಹಾಡುಗಳ ಸಂಗೀತ ನಮನವನ್ನ ಹಮ್ಮಿಕೊಳ್ಳಲಾಗಿತ್ತು.