ಬಯಲು ಸೀಮೆ ಬೀದರ್ನಲ್ಲಿ ಮಲೆನಾಡ ಸೊಬಗು: ಕಣಿವೆ ನಾಡಿನಂತಾಯ್ತು ಬಿಸಿಲ ನಗರಿ - bidar district foggy weather
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4725732-thumbnail-3x2-bdr.jpg)
ಬಯಲು ಸೀಮೆ ಬೀದರ್ನಲ್ಲಿ ಮಲೆನಾಡ ಸೊಬಗು, ಕಣಿವೆ ನಾಡಿನಂತಾಯ್ತು ಬಿಸಿಲ ನಗರಿ ಬೀದರ್ ನಗರದಾದ್ಯಂತ ದಟ್ಟವಾಗಿ ಕವಿದಿರುವ ಮಂಜು, ಮೈಕೊರೆವ ಚಳಿಯ ಮಧ್ಯೆ ಸಂಚರಿಸುತ್ತಿರುವ ಸವಾರರು. ಅಪ್ಪಟ ಮಲೆನಾಡ ಸೊಬಗು ಸೃಷ್ಟಿಯಾಗಿದ್ದು ಬಿಸಿಲ ನಾಡು ಬೀದರ್ನಲ್ಲಿ. ಬೆಳ್ಳಂಬೆಳಗ್ಗೆ ಜಿಲ್ಲಾದ್ಯಂತ ಆವರಿಸಿದ ಮಂಜಿನಿಂದಾಗಿ, ಕಣಿವೆಗಳ ನಾಡಿನಂತೆ ಕಾಣುತಿತ್ತು. ವಾಹನಗಳ ಬೆಳಕು ಕಾಣದಷ್ಟು ಮಂಜು ಕವಿದಿದ್ದು, ನಿಧಾನವಾಗಿಯೆ ವಾಹನ ಸವಾರರು ಸಂಚರಿಸುತ್ತಿದ್ದರು. ಬಿಸಿಲಿನಿಂದಲೇ ಸದಾ ಸುದ್ದಿಯಲ್ಲಿರುವ ಬೀದರ್ ಜಿಲ್ಲೆಯಲ್ಲಿ ಆವರಿಸಿದ ಮಂಜಿನಿಂದ ಸಾರ್ವಜನಿಕರನ್ನು ಪುಳಕಗೊಂಡಿದ್ದಾರೆ.