ಗಣಿನಾಡು ಬಳ್ಳಾರಿಯಲ್ಲಿ ಮಂಜು ಕವಿದ ವಾತಾವರಣ: ಬೆಂಕಿಹಾಕಿ ಚಳಿಕಾಯಿಸಿಕೊಂಡು ಹಮಾಲರು - Bellary district Foggy weather
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5284697-thumbnail-3x2-bly.jpg)
ಬಳ್ಳಾರಿ ನಗರದ ಎಂ.ಜಿ, ಸತ್ಯನಾರಾಯಣ ಪೇಟೆ, ಡಿಸಿ ಬಂಗಲೆ, ಹನುಮಾನ್ ನಗರ, ಮೋತಿ ಪ್ರದೇಶಗಳಲ್ಲಿ ಮಂಜು ಕವಿದ ವಾತಾವರಣ ನಿರ್ಮಾಣವಾಗಿತ್ತು. ಬಳ್ಳಾರಿ ಗ್ರಾಮೀಣ ಪ್ರದೇಶದಲ್ಲಿನ ಸುಧಾಕ್ರಾಸ್ನಲ್ಲಿ ಹಮಾಲಿಗಳು ಬೆಂಕಿ ಹಾಕಿ ಚಳಿಕಾಯಿಸಿಕೊಂಡರು. ಇನ್ನು ರೇಡಿಯೊ ಪಾರ್ಕ್, ಕೌಲ್ ಬಜಾರ್, ಕುವೆಂಪು ನಗರ, ತಿಲಕ ನಗರ, ಆರ್ಟಿಒ ಕಚೇರಿಯ ಮುಂಭಾದ ರಸ್ತೆಗಳಲ್ಲಿ ಸಹ ಮಂಜು ಕವಿದ ವಾತಾವರಣ ನಿರ್ಮಾಣವಾಗಿ ಎದುರಿಗೆ ಬರುವ ವಾಹನಗಳು, ಜನರು ಸಹ ಕಾಣದ ಪರಿಸ್ಥಿತಿ ಉಂಟಾಗಿತ್ತು. ಒಟ್ಟಾರೆಯಾಗಿ ಗಣಿನಾಡು ಬಳ್ಳಾರಿ ಬಿಸಿಲಿನ ಪ್ರಮಾಣದಿಂದ ಮಂಜಿನ ವಾತಾವರಣ ನಿರ್ಮಾಣವಾಗಿದ್ದು ವಿಶೇಷವಾಗಿದೆ.