ಇಳಕಲ್ ಸೀರೆ, ಹೂಮಳೆ ಸುರಿಸಿ ಕೊರೊನಾ ವಾರಿಯರ್ಸ್‌ಗೆ ಸನ್ಮಾನ - ಹೂಮಳೆ ಸುರಿಸಿ ಕೊರೊನಾ ವಾರಿಯರ್ಸ್‌ಗೆ ಸನ್ಮಾನ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7441904-thumbnail-3x2-splo.jpg)
ರಾಯಚೂರಿನಲ್ಲಿ ಕೊರೊನಾ ವಾರಿಯರ್ಸ್‌ಗೆ ಇಳಕಲ್ ಸೀರೆ ನೀಡಿ, ಸನ್ಮಾನಿಸುವ ಮೂಲಕ ಗೌರವ ಸಲ್ಲಿಸಲಾಯಿತು. ನಗರದ ಕನ್ನಡದ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬ್ರೆಸಿಲ್ನಲ್ಲಿ ನೆಲೆಸಿರುವ ಭಾರತೀಯ ಬಾಲಕಿ ಆಶ್ವಿನಿ ಕಾಡ್ಲೂರು ಜನ್ಮದಿನಾಚರಣೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಆತ್ಮನಿರ್ಭರ ಪೂರಕವಾಗಿ ಸನ್ಮಾನಿಸಲಾಯಿತು. ಕೋವಿಡ್-19 ವೇಳೆಯಲ್ಲಿ ಜೀವದ ಹಂಗು ತೊರೆದು ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕ ಮಹಿಳೆಯರು, ಆರೋಗ್ಯ ಇಲಾಖೆಯ ಶುಶ್ರೂಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಗೌರವ ಸಲ್ಲಿಸಬೇಕು ಎಂದು 9 ಜನ ಕೊರೊನಾ ವಾರಿಯರ್ಸ್‌ಗೆ ಇಳಕಲ್ ಸೀರೆ, ಹೂಮಳೆ ಸುರಿಸಿ ಗೌರವ ಸಲ್ಲಿಸಲಾಯಿತು. ಎಸ್ಪಿ ಡಾ. ಸಿ.ಬಿ. ವೇದ ಮೂರ್ತಿ ಸನ್ಮಾನಿಸಿದ್ರೆ, ಆಶ್ವಿನಿ ಕಾಡ್ಲೂರು ಕುಟುಂಬದ ಸದಸ್ಯರು, ಮಹಿಳೆಯರು ಭಾಗವಹಿಸಿದ್ದರು.