ಕಾರವಾರದಲ್ಲಿ ಅರಣ್ಯ ರಕ್ಷಣಾ ಹುತಾತ್ಮರಿಗೆ ಪುಷ್ಪ ನಮನ - ಮೂರು ಸುತ್ತು ಕುಶಾಲತೋಪು
🎬 Watch Now: Feature Video
ಕಾರವಾರ: ಅರಣ್ಯ ರಕ್ಷಣೆ ಕರ್ತವ್ಯದ ವೇಳೆ ಹುತಾತ್ಮರಾದವರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ, ಅರಣ್ಯ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಯಿತು. ಅರಣ್ಯ ಸಂಪತ್ತು ರಕ್ಷಣೆ ವೇಳೆ ಹಾಗೂ ಕಾಡುಗಳ್ಳ ವೀರಪ್ಪನ್ ಹಿಡಿಯುವ ಕಾರ್ಯಾಚರಣೆ ವೇಳೆ, 48 ಮಂದಿ ಅರಣ್ಯ ಪಾಲಕರು ಹುತಾತ್ಮರಾಗಿದ್ದರು. ಅವರ ಸೇವೆಯ ಸವಿನೆನಪಿಗಾಗಿ ಪ್ರತಿವರ್ಷ ಅರಣ್ಯ ಇಲಾಖೆ ವತಿಯಿಂದ ಅರಣ್ಯ ಹುತಾತ್ಮರ ದಿನಾಚರಣೆಯನ್ನ ಆಚರಿಸಲಾಗುತ್ತಿದೆ. ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗಳನ್ನ ಅರ್ಪಿಸಿದ ಬಳಿಕ ಮೂರು ಸುತ್ತು ಕುಶಾಲತೋಪು ಹಾರಿಸುವ ಮೂಲಕ ಗೌರವ ಸೂಚಿಸಲಾಯಿತು.