ಇನ್ನೂ ಸಿಗದ ನೆರೆ ಪರಿಹಾರ: ಕೊಟ್ಟಿಗೆಯಲ್ಲೇ ಬದುಕು ಸವೆಸುತ್ತಿರುವ ನೆರೆ ಸಂತ್ರಸ್ತರು - ನೆರೆ ಪರಿಹಾರ ನೀಡದ ಸರ್ಕಾರ
🎬 Watch Now: Feature Video
ಕಳೆದ ಬಾರಿ ಕಾರವಾರದಲ್ಲಿ ವರುಣನ ಆರ್ಭಟಕ್ಕೆ ಗಂಗಾವಳಿ ನದಿ ಉಕ್ಕಿ ಹರಿದ ಪರಿಣಾಮ ತಿಂಗಳುಗಳ ಕಾಲ ನೆರೆ ನಿಂತು ಅದೆಷ್ಟೊ ಮನೆಗಳು ಧರೆಗುರುಳಿದ್ದವು. ಇತ್ತ ಸರ್ಕಾರ ನೆರೆ ನಿರಾಶ್ರಿತರಿಗೆ ಪರಿಹಾರವನ್ನೂ ಘೋಷಣೆ ಮಾಡಿತ್ತು. ಆದರೆ, ಘಟನೆ ನಡೆದು ಎರಡು ಮಳೆಗಾಲ ಗತಿಸಿದ್ರೂ ಸಹ, ಪ್ರವಾಹ ಸಂತ್ರಸ್ತರಿಗೆ ಮಾತ್ರ ಪರಿಹಾರ ಸಿಕ್ಕಿಲ್ಲ. ಇದ್ದ ಮನೆಯನ್ನು ಕಳೆದುಕೊಂಡು ಬೀದಿಗೆ ಬಂದಿದ್ದ ನದಿ ತೀರದ ಕೆಲ ಕುಟುಂಬಗಳು ಇದೀಗ ಕೊಟ್ಟಿಗೆಯಲ್ಲಿಯೇ ಬದುಕು ಕಟ್ಟಿಕೊಂಡಿವೆ. ಅವರ ಶೋಚನೀಯ ಸ್ಥಿತಿಯ ಕುರಿತ ಸ್ಪೆಷಲ್ ರಿಪೋರ್ಟ್ ಇಲ್ಲಿದೆ.