ಕಣಿವೆ ನಾಡಿನ ತುಂಬೆಲ್ಲಾ ಹಿಮಾಭಿಷೇಕ: ಶ್ರೀನಗರದ ವಿಮಾನ ಸಂಚಾರದಲ್ಲಿ ವ್ಯತ್ಯಯ - valley recieves heavy snowfall
🎬 Watch Now: Feature Video
ಕಾಶ್ಮೀರ ಕಣಿವೆಯಲ್ಲಿ ಒಂದು ವಾರದ ಬಳಿಕ ಹಿಮಪಾತ ಮತ್ತೆ ಆರಂಭವಾಗಿದೆ. ಶ್ರೀನಗರ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಭಾರಿ ಹಿಮಪಾತವಾಗುತ್ತಿದೆ. ಉತ್ತರ ಕಾಶ್ಮೀರದ ಕುಪ್ವಾರಾ, ಬಾರಾಮುಲ್ಲಾ ಮತ್ತು ಬಂಡಿಪೋರಾದಲ್ಲಿ 2 ಸೆಂ.ಮೀ ಗಿಂತ ಹೆಚ್ಚು ಹಿಮ ಬಿದ್ದಿದೆ. ಪ್ರಸ್ತುತ ದಕ್ಷಿಣ ಕಾಶ್ಮೀರದ ಎಲ್ಲಾ ಜಿಲ್ಲೆಗಳಲ್ಲಿ 1 ಸೆಂ.ಮೀ.ಹಿಮ ಸಂಗ್ರಹವಾಗಿದೆ. ತೀವ್ರ ಹಿಮಪಾತದಿಂದಾಗಿ, ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಮಾನಗಳ ಸಮಯದಲ್ಲಿ ವ್ಯತ್ಯಯ ಉಂಟಾಗಿದೆ.