ಭೋರ್ಗರೆಯುವ ಜಲಪಾತದ ಎದುರು ಹಾರಾಡಿದ ರಾಷ್ಟ್ರಧ್ವಜ... ವಿಡಿಯೋ ವೈರಲ್ - viral video
🎬 Watch Now: Feature Video
ಚಾಮರಾಜನಗರ: ಮನೆ-ಮನಗಳಲ್ಲಷ್ಟೇ ಅಲ್ಲದೆ ಇಂದು ಭೋರ್ಗರೆಯುವ ಜಲಪಾತದ ಬಳಿಯೂ ಹಾರಾಡಿದ ಈ ರಾಷ್ಟ್ರಧ್ವಜದ ವಿಡಿಯೋ ದೇಶಪ್ರೇಮವನ್ನು ದುಪ್ಪಟ್ಟು ಮಾಡುತ್ತದೆ. ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತವು ಕಾವೇರಿ ಹೊರಹರಿವಿನಿಂದ ಭೋರ್ಗರೆಯುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ಇಂದು ವೀಕ್ಷಣಾ ಗೋಪುರದಲ್ಲಿ ಅರಣ್ಯ ಸಿಬ್ಬಂದಿ ಧ್ವಜ ಹಾರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.