ಕಸಕ್ಕೆ ಹಚ್ಚಿದ ಬೆಂಕಿ ಕಾರನ್ನೇ ಭಸ್ಮವಾಗಿಸಿತು - ರಾಯಚೂರು ಬೆಂಕಿ ಅವಘಡ

🎬 Watch Now: Feature Video

thumbnail

By

Published : Sep 16, 2019, 9:25 PM IST

ರಾಯಚೂರು: ಕಾರೊಂದಕ್ಕೆ ಬೆಂಕಿ ಹೊತ್ತಿ ಉರಿದಿರುವ ಘಟನೆ ನಗರದಲ್ಲಿ ನಡೆದಿದೆ. ಗಂಜ್ ಆವರಣದ ಹಿಂಬದಿಯಲ್ಲಿ ನಿಲ್ಲಿಸಿದ್ದ ಕಾರಿಗೆ ಬೆಂಕಿ ತಗುಲಿತ್ತು. ಇನ್ನು ಗಂಜ್ ಆವರಣದಲ್ಲಿ ಹುಡುಗರು ಆಟ ಆಡುತ್ತಿದ್ದರು. ಈ ವೇಳೆ ಯಾರೋ ಕಸಕ್ಕೆ ಬೆಂಕಿ ಹಚ್ಚಿದ್ದರು. ಇದರಿಂದ ಪಕ್ಕದಲ್ಲೇ ನಿಂತಿದ್ದ ಓಮ್ನಿ ಕಾರ್‌ಗೆ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ. ಕಾರ್ ಹೊತ್ತಿ ಉರಿಯುತ್ತಿರುವುದನ್ನು ಕಂಡ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಬೆಂಕಿ‌ ನಂದಿಸಿದೆ. ಈ ವಾಹನದ ಮಾಲೀಕರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.