ಕಿಡಿಗೇಡಿಗಳಿಂದ ಕಡಲೆ ಬಣವೆಗೆ ಬೆಂಕಿ: 2.50 ಲಕ್ಷ ರೂ. ಮೌಲ್ಯದ ಕಡಲೆ ನಾಶ! - ಬೆಳಗಾವಿ ಕಡಲೆ ಬಣವೆಗೆ ಬೆಂಕಿ ಲೆಟೆಸ್ಟ್ ನ್ಯೂಸ್
🎬 Watch Now: Feature Video

ಬೈಲಹೊಂಗಲ ತಾಲೂಕಿನ ಸುತಗಟ್ಟಿ ಗ್ರಾಮದ ರೈತ ಪುಂಡಲೀಕ ಮೊರಬದ ಎಂಬುವವರ ಕಡಲೆ ಬಣವೆಗೆ ಬೆಂಕಿ ಬಿದ್ದಿದೆ. ಇವರು ಕಡಲೆ ಕಿತ್ತು ರಾಶಿ ಮಾಡಲಿಕ್ಕೆಂದು ಕಡಲೆಯನ್ನು ಕೂಡಿಟ್ಟಿದ್ದರು. 6 ಎಕರೆ ಭೂಮಿಯಲ್ಲಿ ಬೆಳೆದಿದ್ದ ಕಡಲೆ ಅಂದಾಜು 50ಕ್ಕೂ ಹೆಚ್ಚು ಚೀಲ ಆಗುತ್ತಿತ್ತು. ಆದ್ರೆ, ದುರಾದೃಷ್ಟವಶಾತ್ ಇನ್ನೇನು ರಾಶಿ ಮಾಡಬೇಕಿದ್ದ ಕಡಲೆ ಬಣವೆಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎನ್ನಲಾಗುತ್ತಿದ್ದು, 2.50 ಲಕ್ಷ ರೂ. ಮೌಲ್ಯದ ಕಡಲೆ ನಾಶವಾಗಿದೆ.