ಟ್ರ್ಯಾಕ್ಟರ್ಗೆ ತಗುಲಿದ ವಿದ್ಯುತ್ ತಂತಿ: ಭತ್ತದ ಹುಲ್ಲು ಸಂಪೂರ್ಣ ಭಸ್ಮ - ಭತ್ತದ ಹುಲ್ಲು ತುಂಬಿದ್ದ ಟ್ರ್ಯಾಕ್ಟರ್ನಲ್ಲಿ ಬೆಂಕಿ
🎬 Watch Now: Feature Video
ಭತ್ತದ ಹುಲ್ಲು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ಗೆ ವಿದ್ಯುತ್ ತಂತಿ ತಗುಲಿ ಭತ್ತದ ಹುಲ್ಲು ಹೊತ್ತಿ ಉರಿದ ಘಟನೆ ಹಾವೇರಿ ಸಮೀಪದ ದೇವಗಿರಿಯಲ್ಲಾಪುರದಲ್ಲಿ ನಡೆದಿದೆ. ಹಾವೇರಿಯಿಂದ ದೇವಗಿರಿ ಕಡೆ ಹುಲ್ಲು ತುಂಬಿಕೊಂಡು ಟ್ರ್ಯಾಕ್ಟರ್ ಚಲಿಸುತ್ತಿತ್ತು. ಈ ಸಂದರ್ಭ ಬೆಂಕಿ ಹತ್ತಿದ್ದನ್ನ ಕಂಡ ಸ್ಥಳೀಯರು ಟ್ರ್ಯಾಕ್ಟರ್ ಅನ್ನು ನಿಲ್ಲಿಸಿದ್ದಾರೆ. ಅಲ್ಲದೆ ಬೆಂಕಿ ಹತ್ತಿದ ಹುಲ್ಲು ಮತ್ತು ಟ್ರ್ಯಾಕ್ಟರನ್ನ ಬೇರ್ಪಡಿಸಿದ್ದಾರೆ. ಸ್ಥಳೀಯರ ಸಮಯಪ್ರಜ್ಞೆಯಿಂದ ಟ್ರ್ಯಾಕ್ಟರ್ ಬೆಂಕಿಯ ಕೆನ್ನಾಲಿಗೆಯಿಂದ ಪಾರಾಗಿದೆ. ಆದರೆ ಭತ್ತದ ಹುಲ್ಲು ಸುಟ್ಟು ಭಸ್ಮವಾಗಿದೆ. ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ನಡೆದಿದೆ.