ಮಾಸ್ಕ್ ಧರಿಸದವರಿಗೆ ದಂಡ ಹಾಕಿದ ಚಾಮರಾಜನಗರ ಜಿಲ್ಲಾಧಿಕಾರಿ! - ದಂಡ ಹಾಕಿದ ಚಾಮರಾಜನಗರ ಜಿಲ್ಲಾಧಿಕಾರಿ
🎬 Watch Now: Feature Video
ಚಾಮರಾಜನಗರ: ಕೊರೊನಾ ಮಹಾಮಾರಿ ದಿನೇದಿನೇ ಉಲ್ಬಣವಾಗುತ್ತಿದ್ದರೂ ಮಾಸ್ಕ್ ಧರಿಸದೇ ಬೇಕಾಬಿಟ್ಟಿ ಓಡಾಡುತ್ತಿದ್ದವರಿಗೆ ಡಿಸಿ ದಂಡದ ಬಿಸಿ ತೋರಿಸಿದರು. ನಗರದ ಭುವನೇಶ್ವರಿ ವೃತ್ತ, ಅಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ ಸೇರಿದಂತೆ ಹಲವು ಪ್ರಮುಖ ಸ್ಥಳಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ರೌಂಡ್ಸ್ ಹಾಕಿ ಕೊರೊನಾ ವಿರುದ್ಧ ಮಾಸ್ಕ್ನ ಪ್ರಾಮುಖ್ಯತೆಯ ಜಾಗೃತಿ ಮೂಡಿಸಿದರು. ಮಾಸ್ಕ್ ಧರಿಸದ ಬೈಕ್ ಸವಾರರಿಗೆ 100 ರೂ. ದಂಡ ವಿಧಿಸಿ ಕೊರೊನಾ ವಿರುದ್ಧ ಸಾಂಘಿಕ ಹೋರಾಟ ಅಗತ್ಯ. ಇಮ್ಯುನಿಟಿ ಪವರ್ ಇದೆ ಎಂದು ಉಪೇಕ್ಷಿಸಿದರೇ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು.