ಕಾಫಿಪುಡಿ ತರಲು ಹೋದ ನಿವೃತ್ತ ಯೋಧ ಮರದ ರೆಂಬೆ ಬಿದ್ದು ಸಾವು - Fell off a tree branch
🎬 Watch Now: Feature Video
ಸಕಲೇಶಪುರ: ಮರದ ರೆಂಬೆ ಬಿದ್ದು ನಿವೃತ್ತ ಯೋಧ ಮೃತಪಟ್ಟಿರುವ ಘಟನೆ ಸೋಮವಾರ ಸಂಜೆ ನಗರದಲ್ಲಿ ನಡೆದಿದೆ. ಮಂಡ್ಯದ ನಿವೃತ್ತ ಯೋಧ ಆರ್.ಎಲ್.ಪಟೇಲ್ (35) ಮೃತ ದುರ್ದೈವಿ. ಸ್ನೇಹಿತರ ಜೊತೆ ತಾಲೂಕಿಗೆ ಆಗಮಿಸಿದ್ದರು. ಪಟ್ಟಣದ ಶ್ರೀಗಂಧ ಹೋಟೆಲ್ ಪಕ್ಕದ ಅಂಗಡಿಯೊಂದರಲ್ಲಿ ಕಾಫಿ ಪುಡಿ ತೆಗೆದುಕೊಳ್ಳಲು ಹೋಗುವಾಗ ಮರದ ರೆಂಬೆ ಬಿದ್ದು ಗಾಯಗೊಂಡಿದ್ದಾರೆ. ತಕ್ಷಣ ಅಂಬುಲೆನ್ಸ್ ಮುಖಾಂತರ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಸಂಧರ್ಭದಲ್ಲಿ ಜೊತೆಯಲ್ಲಿದ್ದ ಸ್ನೇಹಿತ ಅಪಾಯದಿಂದ ಪಾರಾಗಿದ್ದಾನೆ. ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
Last Updated : Sep 7, 2020, 7:37 PM IST