ರೈತರ ಆಂದೋಲನಕ್ಕೆ ಬಾಗಲಕೋಟೆಯಲ್ಲಿ ಭಾರೀ ಬೆಂಬಲ : ಹೆದ್ದಾರಿ ತಡೆದು ಪ್ರತಿಭಟನೆ
🎬 Watch Now: Feature Video
ಬಾಗಲಕೋಟೆ : ದೆಹಲಿಯ ರೈತರ ಆಂದೋಲನಕ್ಕೆ ಬೆಂಬಲ ಸೂಚಿಸಿ ಜಿಲ್ಲೆಯ ಹಲವೆಡೆ ರೈತರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದಾರೆ. ಜಿಲ್ಲೆಯ ಇಲಕಲ್ಲ ಪಟ್ಟಣದ ಬಳಿ ಸೋಲಾಪೂರ-ಬೆಂಗಳೂರ ರಾಷ್ಟೀಯ ಹೆದ್ದಾರಿ ತಡೆದು ರೈತರು ಪ್ರತಿಭಟಿಸಿದರು. ಅಲ್ಲದೆ ವಿಜಯಪುರ-ಸಿಂದಗಿ ಹೆದ್ದಾರಿ ಬಂದ್ ಮಾಡಿ ಆಕ್ರೋಶ ಹೊರ ಹಾಕಿದರು. ಸಿಂದಗಿ ನಾಕಾ ಬಳಿ ರಸ್ತೆ ತಡೆ ನಡೆಸಿದಲ್ಲದೆ ರಸ್ತೆಯಲ್ಲಿ ಸಸಿ ನೆಟ್ಟು ಪ್ರತಿಭಟಿಸಿದರು.