ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ ಭೂಮಿಗಾಗಿ ರೈತರ ಪ್ರತಿಭಟನೆ - Farmers protest news
🎬 Watch Now: Feature Video
ಧಾರವಾಡ: ಚಿಕ್ಕ ಮಲ್ಲಿಗವಾಡ ಗ್ರಾಮದ 68 ಬಡ ರೈತರಿಗೆ ಹಕ್ಕು ಪತ್ರ ವಿತರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ರೈತರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ,ಹಕ್ಕು ಪತ್ರ ವಿತರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಜಿಲ್ಲೆಯ ಚಿಕ್ಕಮಲ್ಲಿಗವಾಡ ಗ್ರಾಮದ ಸರ್ವೆ ನಂಬರ್ 709ರ 69ಎಕರೆ ಪ್ರದೇಶವನ್ನು ಬಡ ರೈತರ ಹೆಸರಿನಲ್ಲಿ ಹಕ್ಕು ಪತ್ರ ವಿತರಿಸುವಂತೆ ಆಗ್ರಹಿಸಿದರು. ಅಜ್ಜ ಮತ್ತಜ್ಜರ ಕಾಲದಿಂದ 68 ಜನರು ತಲಾ ಒಂದು ಎಕರೆಯಂತೆ ಆ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದೇವೆ. ಸಮಾಜ ಕಲ್ಯಾಣ ಮತ್ತು ಕಂದಾಯ ಇಲಾಖೆಯ ತಹಶೀಲ್ದಾರ್ ಭೂಮಿ ವೀಕ್ಷಣೆ ಮಾಡಿದ್ದಾರೆ. ಅರಣ್ಯ ಇಲಾಖೆಯ ಆರ್ಎಫ್ಒ ರೈತರ ಪರವಿದ್ದ ವರದಿ ವಿರೋಧಿಸಿ, ನಾಲ್ಕೈದು ವರ್ಷಗಳಿಂದ ವಿಳಂಬಗೊಳಿಸುತ್ತಾ ಬಂದಿದ್ದಾರೆ ಎಂದು ಆರೋಪಿಸಿದರು.