ರೈತರಿಂದ ರಾಜಧಾನಿಯೊಳಗೆ ಬಾರುಕೋಲು ಚಳವಳಿ.. ಮೋದಿ ಬರೀ ಮಾತುಗಾರ ಎಂದು ಗುಡುಗಿದ ಅನ್ನದಾತರು! - farmers protest updates
🎬 Watch Now: Feature Video
ಬೆಂಗಳೂರು ರೈಲು ನಿಲ್ದಾಣದಿಂದ ರೈತರು ಬಾರುಕೋಲು ಚಳವಳಿ ಆರಂಭಿಸಿದ್ದು, ವಿಧಾನಸೌಧ ಮುತ್ತಿಗೆ ಹಾಕಲು ಹೊರಟಿದ್ದಾರೆ. ರಾಜ್ಯದ ಸಾವಿರಾರು ರೈತರು ಇದರಲ್ಲಿ ಭಾಗಿಯಾಗಿದ್ದಾರೆ. ಇದೇ ವೇಳೆ ದೆಹಲಿಯಲ್ಲಿ ಚಳವಳಿ ವೇಳೆ ಮೃತಪಟ್ಟಿರುವ ರೈತರಿಗೆ ಮೌನ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಕೋಡಿಹಳ್ಳಿ ಚಂದ್ರ ಶೇಖರ್ ನೇತೃತ್ವದಲ್ಲಿ ರ್ಯಾಲಿ ನಡೆಯುತ್ತಿದ್ದು, ನೂರಾರು ಪೊಲೀಸರ ಸರ್ಪಗಾವಲಿನಲ್ಲಿ ಮೆರವಣಿಗೆ ಸಾಗಿದೆ. ಬಾರುಕೋಲು, ಹಸಿರು ಶಾಲು, ಹಸಿರು ಬಾವುಟ ಹಿಡಿದ ರೈತರ ರ್ಯಾಲಿ ಮುಂದುವರಿದಿದೆ.