ಹಾವೇರಿ: ಮೆಕ್ಕೆಜೋಳಕ್ಕೆ ಸೂಕ್ತ ಬೆಲೆ ಇಲ್ಲದೆ ರೈತರು ಕಂಗಾಲು - haveri
🎬 Watch Now: Feature Video
ಹಾವೇರಿ: ಜಿಲ್ಲೆಯಲ್ಲಿ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಮೆಕ್ಕೆಜೋಳ ಬೆಳೆಯುತ್ತಾರೆ. ಮೆಕ್ಕೆಜೋಳ ರೈತನಿಗೆ ಆದಾಯ ತಂದರೆ, ಅದರ ಸಪ್ಪೆ ಜಾನುವಾರುಗಳಿಗೆ ಮೇವಾಗುತ್ತದೆ. ಇದರಿಂದ ರೈತರು ಮೆಕ್ಕೆಜೋಳ ಬೆಳೆಯಲು ಮುಂದಾಗುತ್ತಿದ್ದಾರೆ. ಆದರೆ ಪ್ರಸ್ತುತ ವರ್ಷ ಅಧಿಕ ಮಳೆಯಿಂದಾಗಿ ಮೆಕ್ಕೆಜೋಳದ ಸಪ್ಪೆ ಹಾಳಾಗಿದೆ. ಇನ್ನೊಂದು ಕಡೆ ಮೆಕ್ಕೆಜೋಳದ ತೆನೆಗಳು ಒಳಗೊಳಗೆ ಹಾಳಾಗಿವೆ. ಜಾನುವಾರುಗಳಿಗೆ ಮೇವಿಲ್ಲ, ಇತ್ತ ಮೆಕ್ಕೆಜೋಳಕ್ಕೆ ಸೂಕ್ತ ಬೆಲೆ ಇಲ್ಲದಿರುವುದು ರೈತನಲ್ಲಿ ಆತಂಕ ಮೂಡಿಸಿದೆ.