ದಾವಣಗೆರೆ: ಸಾರಿಗೆ ನೌಕರರ ಪರ ಬೀದಿಗಿಳಿದು ಪ್ರತಿಭಟಿಸಿದ ಕುಟುಂಬಸ್ಥರು - families members of transport workers protest in davangere
🎬 Watch Now: Feature Video
ದಾವಣಗೆರೆ: ಸಾರಿಗೆ ನೌಕರರು ಕರೆದಿರುವ ಮುಷ್ಕರ 6ನೇ ದಿನಕ್ಕೆ ಕಾಲಿಟ್ಟಿದೆ. ತಲೆ ಕೆಡಿಸಿಕೊಳ್ಳದ ಕೆಎಸ್ಆರ್ಟಿಸಿ ಅಧಿಕಾರಿಗಳ ವಿರುದ್ಧ ನೌಕರರ ಕುಟುಂಬ ಮಕ್ಕಳು, ಮಡದಿ ಬೀದಿಗಿಳಿದು ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಿದರು. ದಾವಣಗೆರೆ ನಗರದ ಜಯದೇವ ವೃತ್ತದ ಬಳಿ ಇರುವ ಮುರುಘಾ ಮಠದ ಉದ್ಯಾನದಲ್ಲಿ ಜಮಾಯಿಸಿದ ನೌಕರರ ಕುಟುಂಬದ ಸದಸ್ಯರು ಯುಗಾದಿ ಹಬ್ಬ ಬಿಟ್ಟು ಪ್ರತಿಭಟನೆಗೆ ಕುಳಿತಿದ್ದಾರೆ. ತಟ್ಟೆ ಲೋಟ ಬಡಿದು ರಾಜ್ಯ ಸರ್ಕಾರ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಮಕ್ಕಳನ್ನು ಕರೆತಂದು ಪ್ರತಿಭಟನೆಯಲ್ಲಿ ಭಾಗಿಯಾದ ನೌಕರರು, "ಯಡಿಯೂರಪ್ಪ ಒಂದೇ ದಿನ ಬಂದು ಬಸ್ ಓಡಿಸಲಿ. ಸಚಿವರು ಎಸಿ ಕಾರಿನಲ್ಲಿ ಡ್ರೈವರ್ ಇಟ್ಟುಕೊಂಡು ಹೋಗೋದಲ್ಲ. ನಮ್ಮ ಗಂಡಂದಿರ ತರ ಗಾಡಿ ಓಡಿಸಲಿ ಗೊತ್ತಾಗುತ್ತೆ. ಹಬ್ಬ ಇದೆ ಮಕ್ಕಳಿಗೆ ಬಟ್ಟೆ ಇಲ್ಲ. ಮನೆಯಲ್ಲಿ ರೇಷನ್ ಇಲ್ಲ ಹೇಗೆ ಹಬ್ಬ ಮಾಡೋದು. ಕೂಡಲೇ ನಮ್ಮ ಬೇಡಿಕೆ ಈಡೇರಿಸಲು ಒತ್ತಾಯಿಸುತ್ತೇವೆ. ಬೇಡಿಕೆ ಈಡೇರಿದರೆ ಆಗ ನಮಗೆ ನಿಜವಾದ ಯುಗಾದಿ" ಎಂದು ಆಕ್ರೋಶ ವ್ಯಕ್ತಪಡಿಸಿದರು.