ಆನೇಕಲ್: ಹಳ್ಳಿಕಾರ್ ಹೋರಿಗಳ ಸಂಕ್ರಾಂತಿ ಪ್ರದರ್ಶನ - ಸಂಕ್ರಾಂತಿ ಪ್ರದರ್ಶನ
🎬 Watch Now: Feature Video
ಆನೇಕಲ್: ಸೌರವ್ಯೂಹದಲ್ಲಿ ಸೂರ್ಯನ ಪಥ ಚಲನೆ ಬದಲಾಗುವ ಸಂದರ್ಭ ಒಂದಾದರೆ, ನಮ್ಮ ಭೂಮಿ ಮೇಲಿನ ಬೆಳೆಗಾರನ ಕೈಗೆ ಫಸಲು ಸಿಕ್ಕಿ ಬೇಸಿಗೆ ಆರಂಭದಲ್ಲಿಯೇ ಮನೆ ತುಂಬಿಸಿಕೊಂಡು ಜೀವನ ಮಾಡಲು ಬಿಡುವು ಕೊಟ್ಟ ಕಾಲವನ್ನು ಸಂಕ್ರಾಂತಿ ಸುಗ್ಗಿ ಎಂದು ಹಿಗ್ಗುವ ಕಾಲವಿದು. ಇಂತಹ ಹೊತ್ತಿನಲ್ಲಿ ತಮ್ಮ ಘನತೆ ಹೆಚ್ಚಿಸುವ ಹಳ್ಳಿಕಾರ್ ಹೋರಿಗಳನ್ನು ಇಲ್ಲಿ ಪ್ರದರ್ಶನ ಮಾಡಿ ಸಂಭ್ರಮಿಸಿದ್ದಾರೆ. ಮಾಯಸಂದ್ರದಲ್ಲಿ ಹಳ್ಳಿಕಾರ್ ಹೋರಿಗಳ ಸಂಕ್ರಾಂತಿ ಪ್ರದರ್ಶನ ನಡೆಯಿತು. ಪ್ರದರ್ಶನಕ್ಕೂ ಮುನ್ನ ಎತ್ತಿಗಳ ಸಿಂಗರಿಸಿ ಮೆರವಣಿಗೆ ನಡೆಸಲಾಯಿತು. ಹಳೆಯ ಕಾಲದ ಪದ್ಧತಿಯಂತೆ ರೈತರು ಒಂದೆಡೆ ಸೇರಿ ಹಬ್ಬ ಆಚರಣೆ ನಡೆಸಿದರು. ಅಲ್ಲದೆ ಸಾವಯುವ ಕೃಷಿಕರಿಂದ ವಿವಿಧ ತಳಿಯ ಜೋಡೆತ್ತುಗಳು ಎತ್ತಿನ ಗಾಡಿಗಳ ಮೂಲಕ ನೆರೆದವರ ಕಣ್ಮನ ಸೆಳೆದವು.