ಶಿವಮೊಗ್ಗದಲ್ಲಿ ಪರಿಸರ ದಸರಾ ಕಾರ್ಯಕ್ರಮ: ನಟಿ ಭಾವನಾ ರಾವ್ ಭಾಗಿ - ಪೈಪ್ ಕಾಂಪೋಸ್ಟ್ ತಜ್ಞರಾದ ಟಿ.ಎಸ್. ಮಹಾದೇವಸ್ವಾಮಿ
🎬 Watch Now: Feature Video
ಶಿವಮೊಗ್ಗ: ನಗರದಲ್ಲಿ ಪ್ರತಿನಿತ್ಯ 130ರಿಂದ 170 ಟನ್ ಘನತ್ಯಾಜ್ಯ ಸಂಗ್ರಹವಾಗುತ್ತಿದೆ. ಇದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರ ನೀಡಬೇಕಾದರೆ ನಾವು ಈಗಲೇ ಎಚ್ಚೆತ್ತುಕೊಂಡು ಪರಿಸರ ಜಾಗೃತಿ ಮೂಡಿಸಬೇಕಾಗಿದೆ. ಅಲ್ಲದೇ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಮುಂದಾಗಬೇಕೆಂದು ಪರಿಸರ ತಜ್ಞ ಹಾಗೂ ಪೈಪ್ ಕಾಂಪೋಸ್ಟ್ ತಜ್ಞರಾದ ಟಿ.ಎಸ್.ಮಹಾದೇವಸ್ವಾಮಿ ಹೇಳಿದರು. ನಗರದ ಮೈನ್ ಮಿಡಲ್ ಶಾಲೆಯಲ್ಲಿ ಪಾಲಿಕೆ ವತಿಯಿಂದ ಪರಿಸರ ದಸರಾ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಟಿ ಭಾವನಾ ರಾವ್, ದಿವ್ಯ ಉರುಡುಗ, ವಿಹಾರಿಕಾ ಗೌಡ ಹಾಗೂ ಪಾಲಿಕೆ ಮೇಯರ್ ಲತಾ ಗಣೇಶ್, ಉಪ ಮೇಯರ್ ಚನ್ನಬಸಪ್ಪ ಹಾಗೂ ಪಾಲಿಕೆಯ ಸದಸ್ಯರು ಉಪಸ್ಥಿತರಿದ್ದರು.