ದಾಹ ತಿರಿಸಿಕೊಳ್ಳಲು ಕಾಡಿನಿಂದ ನಾಡಿನತ್ತ ಲಗ್ಗೆಯಿಟ್ಟ ಗಜಪಡೆ: ಗ್ರಾಮಸ್ಥರ ಎದೆಯಲ್ಲಿ ಡವ.. ಡವ.. - undefined
🎬 Watch Now: Feature Video

ಹೆಚ್ಚು ನೀರು ಬೇಡುವ ಆನೆ ಪಡೆ ದಾಹ ತೀರದೆ ನಾಡಿನತ್ತ ಮುಖ ಮಾಡಿವೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸೂಳಗಿರಿ ಬಳಿಯ ಅತ್ತಿಮೊಗಂ-ಗಟ್ಟಪಲ್ಲಿ ಸುತ್ತ ಗಜಪಡೆ ಕಾಣಿಸಿಕೊಂಡಿವೆ. ಬೇಸಿಗೆ ಆರಂಭಗೊಂಡು ಕಾಡಿನಲ್ಲೂ ನೀರಿಗೆ-ಮೇವಿಗೆ ಹಾಹಾಕಾರವೆದ್ದಿದೆ. ಈ ಮದ್ಯೆ, ಅದರಲ್ಲೂ ಹೆಚ್ಚು ನೀರು ಬೇಡುವ ಆನೆ ಪಡೆಗೆ ದಾಹ ತೀರದೆ ನಾಡಿನತ್ತ ಮುಖ ಮಾಡಿವೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸೂಳಗಿರಿ ಬಳಿಯ ಅತ್ತಿಮೊಗಂ-ಗಟ್ಟಪಲ್ಲಿ ಸುತ್ತ ಹತ್ತಾನೆಗಳು ಕಾಣಿಸಿಕೊಂಡಿವೆ. ನಿನ್ನೆಯಷ್ಟೇ ಮತದ ಗುಂಗಿನಲ್ಲಿದ್ದ ಗ್ರಾಮೀಣ ಜನೆರಿಗೆ ಗಜಪಡೆ ಇದ್ದಕ್ಕಿದ್ದ ಹಾಗೆ ಕಾಣಿಸಿಕೊಂಡಿದ್ದು ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ನೀರಿನ ಸೆಲೆಯ ವಾಸನೆಗೆ ತೋಟದ ಕೊಳವೆ ಬಾವಿಗಳ ಪೈಪ್ಗಳನ್ನೇ ಕಿತ್ತೆಸೆಯುವ ಆನೆಯ ಕಾಟಕ್ಕೆ ಬೆಳೆಗಾರ ಆತಂಕ ವ್ಯಕ್ತಪಡಿಸುತ್ತಿದ್ದಾರೆ.