ಬೃಹತ್ ಮೆರವಣಿಗೆ ಮೂಲಕ ಈದ್ ಮಿಲಾದ್ ಸಂಭ್ರಮ.. - ಮೂಡಿಗೆರೆ ಈದ್ ಮಿಲಾದ್ ಸಂಭ್ರಮಾಚರಣೆ
🎬 Watch Now: Feature Video
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ನಲ್ಲಿ ಸಾವಿರಾರು ಮುಸ್ಲಿಮರು ಈದ್ ಮಿಲಾದ್ ಹಬ್ಬ ಆಚರಣೆ ಮಾಡಿದರು. ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ 1494ನೇ ಜನ್ಮ ದಿನದ ಅಂಗವಾಗಿ ಚಕಮಕ್ಕಿಯಿಂದ ಬಣಕಲ್ವರೆಗೂ ಒಂದು ಸಾವಿರಕ್ಕೂ ಅಧಿಕ ಮುಸ್ಲಿಮರು ಬೃಹತ್ ಮೆರವಣಿಗೆ ಮಾಡುವುದರ ಮೂಲಕ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದರು. ಈ ವೇಳೆ ಯುವಕರು ಕುಣಿದು ಕುಪ್ಪಳಿಸಿದರು. ಮೆರವಣಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮೂಡಿಗೆರೆ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.