ಆಪ್ಗೆ ದೆಹಲಿ ಗದ್ದುಗೆ... ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯೆ ಹೀಗಿದೆ...!
🎬 Watch Now: Feature Video
ಚಾಮರಾಜನಗರ: ಅರವಿಂದ್ ಕೇಜ್ರಿವಾಲ್ ದೆಹಲಿಯಲ್ಲಿ ಮೂರನೇ ಬಾರಿಗೆ ಸಿಎಂ ಆಗುತ್ತಿರುವ ಕುರಿತು ನಗರದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದರು. ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿಯ ಆಡಳಿತದ ಬಗ್ಗೆ ಮತದಾರ ತನ್ನ ಪ್ರತಿಕ್ರಿಯೆ ತೋರಿದ್ದಾನೆ. ಬಿಜೆಪಿಗೆ ಬಹುಮತ ಗಳಿಸುವ ವಿಶ್ವಾಸವಿತ್ತು. ಆದರೆ ಅನೇಕ ಕಾರಣಗಳಿಂದ ಬಹುಮತ ಗಳಿಸಲು ಸಾಧ್ಯವಾಗಿಲ್ಲ. ಸೋಲಿನ ಬಗ್ಗೆ ಪಕ್ಷದ ಪ್ರಮುಖರು ಅವಲೋಕನ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಜೊತೆಗೆ, ದೆಹಲಿ ಅಭಿವೃದ್ಧಿಗೊಳಿಸಲು ಕೇಜ್ರಿವಾಲ್ ಅವರಿಗೆ ಇದೊಂದು ಉತ್ತಮ ಅವಕಾಶ ಎಂದಿದ್ದಾರೆ.