ಆರ್ಥಿಕ ಹಿಂಜರಿತ ಜಾಗತಿಕ ಹೂಡಿಕೆದಾರರ ಮೇಲೆ ಪರಿಣಾಮ ಬೀರಲ್ಲ: ಸಚಿವ ಶೆಟ್ಟರ್ - ಸಿಐಐ ಕರ್ನಾಟಕ ವಾರ್ಷಿಕೋತ್ಸವ
🎬 Watch Now: Feature Video
ಬೆಂಗಳೂರು: ಸಿಐಐ ಕರ್ನಾಟಕ ತನ್ನ 125ನೇ ವಾರ್ಷಿಕೋತ್ಸವವನ್ನು ಇಂದು ನಗರದ ಖಾಸಗಿ ಹೋಟೆಲ್ನಲ್ಲಿ ಅಯೋಜಿಸಿತ್ತು. ವಾರ್ಷಿಕೋತ್ಸವದಲ್ಲಿ ನೂತನ ಅಧ್ಯಕ್ಷರಾಗಿ ಟಾಟಾ ಹಿಟಾಚಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಸಿಂಗ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತ್ರಿಎಂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಮೇಶ್ ರಾಮದೊರೈ ಅವರ ಹೆಸರು ಘೋಷಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್, ಆರ್ಥಿಕ ಹಿಂಜರಿತ ತಾತ್ಕಾಲಿಕ ಅಷ್ಟೇ. ಆರ್ಥಿಕ ಹಿಂಜರಿತ ಇದ್ದಿದ್ದರೆ ಹುಬ್ಬಳ್ಳಿಯಲ್ಲಿ ಆದ ಹೂಡಿಕೆ ಸಮಾವೇಶ ಯಶಸ್ವಿ ಆಗುತ್ತಿರಲಿಲ್ಲ ಎಂದರು.