ಕೋಲಾರದಲ್ಲಿ ಮೋದಿಯಿಂದ ಪ್ರಚಾರ...! - kannada news
🎬 Watch Now: Feature Video

ಕೋಲಾರ: ಪ್ರಧಾನಿ ನರೇಂದ್ರ ಮೋದಿ ಮನೆ ಮನೆ ಪ್ರಚಾರ ಮಾಡಿ ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಸ್.ಮುನಿಸ್ವಾಮಿ ಪರ ಮತಯಾಚನೆ ಮಾಡಿದ್ರು. ಆದರೆ ಇವರು ಪ್ರಧಾನಿ ಮೋದಿಯಲ್ಲ. ಅವರನ್ನೇ ಹೋಲುವ ಮೋದಿ ಅಭಿಮಾನಿ. ಥೇಟ್ ಮೋದಿಯವರನ್ನೇ ಹೋಲುವ ಇವರು ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಬಿಜೆಪಿ ಪರ ಪ್ರಚಾರ ನಡೆಸಿದ್ರು. ಸಂದಾನಂದ ನಾಯಕ್ ಎಂಬ ಉಡುಪಿಯ ಮೂಲದ ವ್ಯಕ್ತಿ ಮೋದಿಯವರ ಆಡಳಿತಕ್ಕೆ ಪ್ರಭಾವಿತನಾಗಿ ಈ ಅಳಿಲು ಸೇವೆ ಮಾಡುತ್ತಿರುವುದಾಗಿ ಹೇಳಿದ್ರು.