ಇತರರ ಕಷ್ಟಕ್ಕೆ ಸ್ಪಂದಿಸುವಂತೆ ಹೇಳಿಕೊಟ್ಟಿದ್ದರು: ಬೆಳಗೆರೆ ನೆನೆದು ಭಾವುಕರಾದ ಡಾ. ನಿರಂಜನ್ ಎಲ್ಲೂರು - ರವಿ ಬೆಳೆಗೆರೆ ಅಂತಿಮ ದರ್ಶನ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9531187-thumbnail-3x2-bng.jpg)
ಬೆಂಗಳೂರು: ರವಿ ಬೆಳಗೆರೆ ಬೇರೆಯವರ ಕಷ್ಟಕ್ಕೆ ಸ್ಪಂದಿಸುವಂತೆ ಹೇಳಿದ್ದರು ಎಂದು ಆಪ್ತರಾದ ಡಾ. ನಿರಂಜನ್ ಎಲ್ಲೂರು ಬೆಳಗೆರೆ ನೆನೆದು ಭಾವುಕರಾದರು. ರವಿ ಬೆಳಗೆರೆ ಅಂತಿಮ ದರ್ಶನ ಪಡೆದ ದೀರ್ಘ ಕಾಲದ ಒಡನಾಡಿ ಡಾ. ನಿರಂಜನ್ ಎಲ್ಲೂರು ಮಾಧ್ಯಮದವರೊಂದಿಗೆ ಮಾತನಾಡಿದರು, 1981ರಿಂದ ನಾವು ಪರಿಚಿತರು. ಇವತ್ತಿನವರೆಗೂ ಬದುಕಿನ ಎಲ್ಲ ಪಾಠಗಳನ್ನು ಹೇಳಿಕೊಟ್ಟು, ಇತರರ ಸಂಕಷ್ಟಕ್ಕೆ ಸ್ಪಂದಿಸುವಂತೆ ತಿಳಿಸಿದ್ದರು. ಜಾತಿ, ಅಂತಸ್ತುಗಳನ್ನು ಮರೆತು ಬದುಕಲು ಹೇಳಿಕೊಟ್ಟವರು ಇಷ್ಟು ಬೇಗ ನಮ್ಮನ್ನು ಬಿಟ್ಟು ಹೊರಡುತ್ತಾರೆಂದು ಅಂದುಕೊಂಡಿರಲಿಲ್ಲ ಎಂದು ಭಾವುಕರಾದರು.
Last Updated : Nov 13, 2020, 11:45 AM IST