ಗಣಿನಾಡಿನಲ್ಲಿ ಗೊಂಬೆ ಪ್ರದರ್ಶನ.. ಹಲವು ವಿಷಯಗಳ ಕುರಿತು ಜಾಗೃತಿ
🎬 Watch Now: Feature Video
ಬಳ್ಳಾರಿ:ಗಣಿನಾಡಿನಲ್ಲಿ ಕಳೆದ 33 ವರ್ಷಗಳಿಂದ ಮನೆಯಲ್ಲಿ ಗೊಂಬೆಗಳನ್ನು ಪ್ರದರ್ಶನಕ್ಕಿಡಲಾಗುತ್ತಿದೆ. ಗ್ರಾಮಾಂತರ ಪ್ರದೇಶದ ರೇಡಿಯೋ ಪಾರ್ಕ್ ಹತ್ತಿರದ ಕನಕ ಬೀದಿಯ ದಾಮೋದರ್ ಮತ್ತು ವಿ ಕೆ ರಾಜೇಶ್ವರಿ ದಂಪತಿಯ ಮನೆಯಲ್ಲಿ ದಸರಾದ ನವರಾತ್ರಿಯ ದಿನದಿಂದ ಸುಮಾರು 10 ದಿನಗಳ ಕಾಲ ಗೊಂಬೆಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತೆ. ಗೊಂಬೆಗಳನ್ನು ಪ್ರದರ್ಶನಕ್ಕೆ ಇಡುವ ಜೊತೆಗೆ ಜಾಗೃತಿ ಮೂಡಿಸುವ ಕೆಲಸ ಕೂಡ ಈ ದಂಪತಿ ಮಾಡುತ್ತಿದ್ದಾರೆ. ಗೊಂಬೆಗಳನ್ನು ನೋಡಲು ಬಂದವರಿಗೆ ರಸ್ತೆಯ ನಿಯಮ, ಸರಿಯಾದ ಪಾರ್ಕಿಂಗ್, ಪ್ಲಾಸ್ಟಿಕ್ ಬದಲಿಗೆ ಬಟ್ಟೆ, ಕಾಗದದ ಬ್ಯಾಗ್ ಬಳಸುವುದು ಹೀಗೆ ಅನೇಕ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಹತ್ತು ದಿನಗಳಲ್ಲಿ ಸಂಜೆ 6 ಗಂಟೆಯ ನಂತರ ಸಾರ್ವಜನಿಕರು ಗೊಂಬೆ ನೋಡಲು ಬರ್ತಾರೆ.