ETV Bharat / entertainment

'ಟಾಕ್ಸಿಕ್' ಚಿತ್ರೀಕರಣಕ್ಕಾಗಿ ಮರ ಕಡಿದ ಆರೋಪ: ಎಫ್ಐಆರ್ ದಾಖಲಿಸಿದ ಅರಣ್ಯ ಇಲಾಖೆ

'ಟಾಕ್ಸಿಕ್' ಚಿತ್ರೀಕರಣಕ್ಕಾಗಿ ಮರ ಕಡಿದ ಆರೋಪ ಹಿನ್ನೆಲೆ ಚಲನಚಿತ್ರ ನಿರ್ಮಾಣ ಸಂಸ್ಥೆಗಳ ವಿರುದ್ಧ ಎಫ್​ಐಆರ್ ದಾಖಲಾಗಿದೆ.

Eshwara Khandre
ಸಚಿವ ಈಶ್ವರ್ ಖಂಡ್ರೆ (Photo: ETV Bharat)
author img

By ETV Bharat Entertainment Team

Published : Nov 12, 2024, 5:42 PM IST

ಬೆಂಗಳೂರು: ಯಶ್​ ಮುಖ್ಯಭೂಮಿಕೆಯ 'ಟಾಕ್ಸಿಕ್' ಚಿತ್ರೀಕರಣಕ್ಕಾಗಿ ಮರ ಕಡಿದ ಆರೋಪದಡಿ ಕೆವಿಎನ್, ಮಾನ್​ಸ್ಟರ್ ಮೈಂಡ್ ಕ್ರಿಯೇಷನ್, ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್, ಹೆಚ್​​​ಎಂಟಿಯ ಜನರಲ್ ಮ್ಯಾನೇಜರ್ ವಿರುದ್ಧ ಅರಣ್ಯ ಇಲಾಖೆ ಎಫ್​ಐಆರ್ ದಾಖಲಿಸಿದೆ.

ಈ ಸಂಬಂಧ ಮಾತನಾಡಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಪೀಣ್ಯ ಪ್ಲಾಂಟೇಷನ್ ಸರ್ವೇ ನಂ.2ರ ಮೀಸಲು ಅರಣ್ಯ ಪ್ರದೇಶದಲ್ಲಿ ಸಿನಿಮಾ ಶೂಟಿಂಗ್​ಗೆ ಸೆಟ್ ನಿರ್ಮಿಸಲು ಮರಗಿಡಗಳನ್ನು ಕತ್ತರಿಸಿರುವ ಆರೋಪ ಹಿನ್ನೆಲೆ ಎಫ್ಐಆರ್ ದಾಖಲಿಸಲಾಗಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶದ ಮೇರೆಗೆ ಎಫ್​ಐಆರ್​ ದಾಖಲಿಸಲಾಗಿದೆ. ಅರಣ್ಯ ಕಾಯ್ದೆಯ ಪ್ರಕಾರ ಎಫ್​ಐಆರ್ ದಾಖಲು ಮಾಡಲಾಗಿದೆ ಎಂದು ತಿಳಿಸಿದರು.

ಸಚಿವ ಈಶ್ವರ್ ಖಂಡ್ರೆ (video: ETV Bharat)

ಉಪಗ್ರಹ ಆಧಾರಿತ ಚಿತ್ರಗಳನ್ನು ಸಂಗ್ರಹಿಸಲಾಗಿದೆ. ಯಾರು ಮರಗಳನ್ನು ಕಡಿದಿದ್ದಾರೆ ಎಂಬುದು ಗೊತ್ತಿಲ್ಲ. ತನಿಖೆ ಸಾಗಿದ್ದು, ಈ ಬಗ್ಗೆ ತಿಳಿದುಬರಲಿದೆ. ತನಿಖೆಯಲ್ಲಿ ಏನು ವರದಿ ಬರುತ್ತದೋ ಆ ಪ್ರಕಾರ ಕ್ರಮ ಆಗಲಿದೆ. ಕಳೆದ ವರ್ಷದ ಉಪಗ್ರಹ ಆಧಾರಿತ ಚಿತ್ರಗಳು ಸಹ ಇವೆ. ಇವೆಲ್ಲವೂ ತನಿಖೆಯಲ್ಲಿ ಬರುತ್ತವೆ. ಪೀಣ್ಯ ಪ್ಲಾಂಟೇಷನ್​​ನಲ್ಲಿ ದಟ್ಟ ಕಾಡಿತ್ತು, ಮರಗಳಿದ್ದವು. ಅಕ್ರಮವಾಗಿ ಮರ ಕಡಿದಿರುವ ಆರೋಪಗಳು ಕೇಳಿಬಂದವು. ನಮ್ಮ ಅಧಿಕಾರಿಗಳು ಹೋಗಿ ಪರಿಶೀಲಿಸಿದ್ದರು. ಮರ ಕಡಿದಿದ್ದು ಸ್ಪಷ್ಟವಾದ ಹಿನ್ನೆಲೆಯಲ್ಲಿ ದೂರು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಮರಗಳನ್ನು ಕಡಿದದ್ದು ಸಾಬೀತಾದ ಹಿನ್ನೆಲೆ, ಎಫ್​​ಐಆರ್ ದಾಖಲಾಗಿದೆ. ಯಾರು ಮರ ಕಡಿದಿದ್ದಾರೆ ಅನ್ನೋದು ಗೊತ್ತಿಲ್ಲ. ತನಿಖೆ ನಡೆಯುತ್ತಿದ್ದು, ಅದು ಪೂರ್ಣಗೊಂಡ ಮೇಲೆ ಮಾಹಿತಿ ಸಿಗುತ್ತದೆ. ಎಷ್ಟು ಮರಗಳು ಅನ್ನೋ ಮಾಹಿತಿ ಇಲ್ಲ. ಚಿತ್ರತಂಡ ಮರ ಕಡಿದಿದೆ ಅಂತ ಹೇಳಲು ಬರೋದಿಲ್ಲ. ತನಿಖೆಯಿಂದ ಎಲ್ಲವೂ ಹೊರಬರಬೇಕು. ಸಿನಿಮಾ ಬಿಡುಗಡೆಗೆ ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ರಾಕಿಂಗ್​ ಸ್ಟಾರ್​ ಯಶ್​ ರಾಧಿಕಾ ಪುತ್ರನ ಗ್ರ್ಯಾಂಡ್​​ ಬರ್ತ್​ಡೇ ಸೆಲೆಬ್ರೇಶನ್​: ವಿಡಿಯೋ ನೋಡಿ

ಅಧಿಕಾರಿಗಳಿಗೆ ನೋಟಿಸ್ ವಿಚಾರವಾಗಿ ಮಾತನಾಡಿ, ಅಂದಿನ ಹಿರಿಯ ಅಧಿಕಾರಿಗಳಿಗೆ ಅರಣ್ಯ ಕಾಯ್ದೆ ಬಗ್ಗೆ ಗೊತ್ತಿದೆ. ಗೊತ್ತಿದ್ದು ತಪ್ಪು ಮಾಹಿತಿಯನ್ನು ಸುಪ್ರೀಂ ಕೋರ್ಟ್​ಗೆ ನೀಡಿದ್ದಾರೆ. ಯಾರನ್ನು ಕೇಳಿ ತಪ್ಪು ಮಾಹಿತಿ‌ ನೀಡಿದ್ದಾರೆ. ಐಎ ಹಾಕಿದ್ದಾರೆ. ಅಲ್ಲಿ ಅರಣ್ಯ ಇಲ್ಲ ಅಂತಾ ಬಿಂಬಿಸಿದ್ದಾರೆ. ಅಧಿಕಾರಿಗಳು ಇನ್ನೂ ಉತ್ತರ ನೀಡಿಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.

ಇದನ್ನೂ ಓದಿ: Watch: ಮುಂಬೈನಲ್ಲಿ ಯಶ್​​ - ಕಿಯಾರಾ ಅಡ್ವಾಣಿ; 'ಟಾಕ್ಸಿಕ್'​​​ಗೆ ಬಾಲಿವುಡ್​ ನಟಿ?

'ಟಾಕ್ಸಿಕ್​​', ಭಾರತದಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಬ್ಲಾಕ್​​ಬಸ್ಟರ್​ ಕೆಜಿಎಫ್​ ಬಳಿಕ ಬರುತ್ತಿರುವ ರಾಕಿಂಗ್​ ಸ್ಟಾರ್​ ಯಶ್​ ಮುಖ್ಯಭೂಮಿಕೆಯ ಸಿನಿಮಾವಾದ ಹಿನ್ನೆಲೆ ಸಾಕಷ್ಟು ನಿರೀಕ್ಷೆಗಳಿವೆ. ಸಿನಿಮಾದ ಲೇಟೆಸ್ಟ್​ ವಿಚಾರವೆಂದರೆ, ಯಶ್​ ಜೊತೆ ಬಾಲಿವುಡ್​ ನಟಿ ಕಿಯಾರಾ ಅಡ್ವಾಣಿ ಕಾಣಿಸಿಕೊಂಡಿದ್ದಾರೆ. ರಾಕಿಂಗ್​ ಸ್ಟಾರ್​ ಜೊತೆ ನಾಯಕಿಯಾಗಿ ಯಾರು ನಟಿಸಲಿದ್ದಾರೆ ಎಂಬ ಕುತೂಹಲ ಬಹಳ ದಿನಗಳಿಂದಲೂ ಇದೆ. ಕಿಯಾರಾ ಅಲ್ಲದೇ ಸೌತ್​ ಲೇಡಿ ಸೂಪರ್ ಸ್ಟಾರ್​​ ನಯನತಾರಾ ಅವರ ಹೆಸರು ಈ ಮೊದಲಿನಿಂದಲೂ ಕೇಳಿಬಂದಿತ್ತು. ಅದರಂತೆ ಇತ್ತೀಚೆಗಷ್ಟೇ, ಮುಂಬೈನ ವರ್ಸೋವಾದಲ್ಲಿ ಈ ಇಬ್ಬರು ಕಾಣಿಸಿಕೊಂಡಿದ್ದಾರೆ. ಇಬ್ಬರೂ ಬಿಗಿ ಭದ್ರತೆ ನಡುವೆ ಸಾಗಿದ್ದಾರೆ. ವಿಡಿಯೋಗಳು ವೈರಲ್​ ಆಗಿದ್ದು, ಸಿನಿಮಾ ಮೇಲಿನ ಕುತೂಹಲ ದುಪ್ಪಟ್ಟಾಗಿದೆ. ಚಿತ್ರ 2025ರ ಏಪ್ರಿಲ್​ನಲ್ಲಿ ತೆರೆಕಾಣಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.