ETV Bharat / state

ಹೆಚ್​​ಡಿಕೆ - ಜಮೀರ್ ಗಳಸ್ಯ ಕಂಠಸ್ಯ, ಹೆಚ್ಚು ಚರ್ಚೆ ಅಗತ್ಯವಿಲ್ಲ: ಸಚಿವ ಜಿ.ಪರಮೇಶ್ವರ್ - JAMEER AHAMAD CONTROVERSY

ಜಮೀರ್ ಅಹ್ಮದ್ ಮತ್ತು ಹೆಚ್​.ಡಿ.ಕುಮಾರಸ್ವಾಮಿ ಒಳ್ಳೆಯ ಸ್ನೇಹಿತರು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಸಚಿವ ಪರಮೇಶ್ವರ್
ಸಚಿವ ಜಿ.ಪರಮೇಶ್ವರ್ (ETV Bharat)
author img

By ETV Bharat Karnataka Team

Published : Nov 12, 2024, 5:44 PM IST

ಬೆಂಗಳೂರು: ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಚಿವ ಜಮೀರ್ ಅಹ್ಮದ್ ಬಹಳ‌ ಸ್ನೇಹಿತರು, ಗಳಸ್ಯ ಕಂಠಸ್ಯ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು. ಸದಾಶಿವನಗರದಲ್ಲಿ ಮಾತನಾಡಿದ ಅವರು, ಹೆಚ್‌ಡಿಕೆ ವಿರುದ್ಧ ಸಚಿವ ಜಮೀರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರಿಬ್ಬರು ಬಹಳ‌ ಸ್ನೇಹಿತರು, ಗಳಸ್ಯ ಕಂಠಸ್ಯ. ಒಬ್ಬರಿಗೊಬ್ಬರು ಪರಸ್ಪರ ಮಾತನಾಡಿಕೊಳ್ಳುವುದು ಹೊಸದೇನಲ್ಲ. ಜಮೀರ್ ಅವರೇ ಹೇಳಿಕೊಂಡಿದ್ದಾರೆ. ನಾನು ಅವರನ್ನು ಕರಿಯಣ್ಣ ಅಂತಿದ್ದೆ. ಅವರು ಕುಳ್ಳ ಅಂತಿದ್ದರು ಅಂತಾ. ಅವರ ಹೇಳಿಕೆಗಳು ವೈಯುಕ್ತಿಕ ವಿಚಾರಗಳು. ಹೀಗಾಗಿ ಹೆಚ್ಚು ಚರ್ಚೆ ಅಗತ್ಯವಿಲ್ಲ ಎಂದರು‌.

ಮೂರು ಕ್ಷೇತ್ರಗಳ ಉಪಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮ ವರದಿ ಪ್ರಕಾರ ಮೂರು ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕೆಕೆಆರ್​​ಡಿಬಿಯಲ್ಲಿ ಅಕ್ರಮ ವಿಚಾರವಾಗಿ ಪ್ರತಿಕ್ರಿಯಿಸಿ, ಮೇಲ್ನೋಟಕ್ಕೆ ದುರ್ಬಳಕೆ ಆಗಿರೋದು ಬಂದಿದೆ. ಹಣ ದರ್ಬಳಕೆ ಆಗಿದೆ. ವರ್ಷಕ್ಕೆ ನೂರು ಕೋಟಿಯಂತೆ ದುರ್ಬಳಕೆ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಮೂರು ವರ್ಷಕ್ಕೆ 300 ಕೋಟಿ ಆಗಲಿದೆ. ತನಿಖೆಯ ಬಳಿಕ ಎಲ್ಲವೂ ಗೊತ್ತಾಗಲಿದೆ ಎಂದು ತಿಳಿಸಿದರು.

ಅಸಮರ್ಥ ಸರ್ಕಾರ ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ, ಅದು ಅವರ ಅಭಿಪ್ರಾಯ ಅಷ್ಟೇ. ನಮ್ಮ ಅಭಿಪ್ರಾಯ ಬೇರೆಯೇ ಇದೆ. ನಮ್ಮದು ಸಮರ್ಥ ಸರ್ಕಾರ, ಸಮರ್ಥ ಮುಖ್ಯಮಂತ್ರಿ ಎಂದು ತಿರುಗೇಟು ನೀಡಿದರು.

ಕ್ಷಮೆಯಾಚಿಸಿದ ಜಮೀರ್: ಮೈಸೂರಲ್ಲಿ ಮಾತನಾಡಿದ ಸಚಿವ ಜಮೀರ್ ಅಹ್ಮದ್, ನಾನು ಮತ್ತು ಕುಮಾರಸ್ವಾಮಿ ಮೊದಲು 24 ಗಂಟೆಯಲ್ಲಿ 16 ಗಂಟೆ ಜೊತೆಯಲಿರುತ್ತಿದ್ದೆವು. ಆಗ ಅವರು ನನಗೆ ಪ್ರೀತಿಯಿಂದ ಕುಳ್ಳ ಅನ್ನುತ್ತಿದ್ದರು, ನಾನು ಅವರಿಗೆ ಕರಿಯಣ್ಣ ಎನ್ನುತ್ತಿದ್ದೆ. ಕರಿಯಣ್ಣ ಎಂದು ಬಹಳಷ್ಟು ಬಾರಿ ಕರೆದಿದ್ದೇನೆ. ಚುನಾವಣೆ ಹಿನ್ನೆಲೆ ವಿವಾದ ಸೃಷ್ಟಿಯಾಗಿದೆ ಅಷ್ಟೇ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಸಚಿವ ಜಮೀರ್‌ ಅಹ್ಮದ್‌ ಇಂದು ಪ್ರತಿಕ್ರಿಯೆ ನೀಡಿದರು.

ಯಾರಾದರು ದೇವೇಗೌಡರ ಕುಟುಂಬವನ್ನು ಕೊಂಡುಕೊಳ್ಳಲು ಸಾಧ್ಯವೇ?. ನನಗೆ ದೇವೇಗೌಡರ ಮೇಲೆ ಬಹಳ ಗೌರವವಿದೆ. ಈ ಹಿಂದೆ ಚುನಾವಣೆಯಲ್ಲಿ ಮುಸ್ಲಿಂ ಮತಗಳನ್ನು ಖರೀದಿ ಮಾಡುತ್ತೇನೆ ಎಂದಿದ್ದರು. ಆ ವಿಚಾರವನ್ನು ಉಲ್ಲೇಖಿಸಿ ನಾನು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ ಪರ ಮತಯಾಚಿಸುವ ಸಂದರ್ಭದಲ್ಲಿ ಜಮೀರ್ ಮಾತನಾಡುವಾಗ ಹೆಚ್​.ಡಿ.ಕುಮಾರಸ್ವಾಮಿ ಅವರನ್ನು ಕರಿಯ ಅಂತಾ ಕರೆದಿದ್ದರು. ಇದು ವಿವಾದಕ್ಕೆ ಗುರಿಯಾಗಿದೆ.

ಇದನ್ನೂ ಓದಿ: ಹೆಚ್‌ಡಿಕೆಗೆ 'ಕರಿಯಣ್ಣ' ಎಂದು ಸಂಬೋಧನೆ: ಕ್ಷಮೆಯಾಚಿಸಿದ ಸಚಿವ ಜಮೀರ್​ ಅಹ್ಮದ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.