ಚಿರತೆ ಆಹಾರವಾಗಬೇಕಿದ್ದ ನಾಯಿ ಗ್ರೇಟ್ ಎಸ್ಕೇಪ್: ವಿಡಿಯೋ ವೈರಲ್ - ವೈರಲ್ ವಿಡಿಯೋ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-14040697-thumbnail-3x2-bngjpg.jpg)
ಮೈಸೂರು: ಚಿರತೆ ಬಾಯಿಗೆ ಆಹಾರವಾಗ ಬೇಕಿದ್ದ ನಾಯಿ ಹೋರಾಟ ಮಾಡಿ ತನ್ನ ಪ್ರಾಣ ಉಳಿಸಿಕೊಂಡ ಘಟನೆ ಬೆಳಕಿಗೆ ಬಂದಿದೆ. ನಾಯಿಯನ್ನು ಬೇಟೆಯಾಡಿದ ಚಿರತೆ ಅದನ್ನು ಸಾಯಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತದೆ. ಆದರೆ, ಚಾಲಾಕಿ ನಾಯಿ ಚಿರತೆಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಈ ಘಟನೆ ಮೈಸೂರು ಭಾಗದಲ್ಲಿ ನಡೆದಿದೆ ಎನ್ನಲಾಗಿದ್ದು, ನಿಖರ ಮಾಹಿತಿ ತಿಳಿದಿಲ್ಲ.