ಮನೆ ಮಗನಂತಿದ್ದ 'ಟೈಸನ್' ಮರೆಯಾದ: ದಂಪತಿಯಿಂದ ಪ್ರೀತಿಯ ಶ್ವಾನದ ತಿಥಿ ಕಾರ್ಯ
🎬 Watch Now: Feature Video
ಹಾವೇರಿ: ಸಾವನ್ನಪ್ಪಿದ ಮನುಷ್ಯರ ತಿಥಿ ಮಾಡುವುದನ್ನ ನಾವೆಲ್ಲರೂ ನೋಡಿದ್ದೇವೆ. ಆದರೆ ಜಿಲ್ಲೆಯ ಸವಣೂರಿನ ಮನೆಯೊಂದರಲ್ಲಿ ನಾಯಿಯ ತಿಥಿ ಮಾಡುವ ಮೂಲಕ ದಂಪತಿ ಪ್ರಾಣಿ ಪ್ರೇಮ ಮೆರೆದಿದ್ದಾರೆ. ಮಕ್ಕಳಿಲ್ಲದ ಪ್ರಶಾಂತ ಮತ್ತು ಪಾರ್ವತಿ ದಂಪತಿ ಶ್ವಾನ 'ಟೈಸನ್' ಅನ್ನು ಮನೆ ಮಗನಂತೆ ಸಾಕಿದ್ದು, ಅನಾರೋಗ್ಯದಿಂದ ಕೊನೆಯುಸಿರೆಳೆದಿದೆ. ಇದಕ್ಕೆ ಶಾಸ್ತ್ರೋಕ್ತವಾಗಿ ತಿಥಿ ಕಾರ್ಯ ನೆರವೇರಿಸಲಾಗಿದೆ.