ETV Bharat / state

ಹಾವೇರಿ : ಎಲ್​ಡಿಒ ಆಯಿಲ್ ಟ್ಯಾಂಕ್​ನಲ್ಲಿ ಬಿದ್ದು ಯುವಕ ಸಾವು - YOUNG MAN DIED

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಕರಿ ಗ್ರಾಮದಲ್ಲಿ ಡಾಂಬರ್ ಕಾಯಿಸಲು ಬಳಸುವ ಎಲ್​​ಡಿಒ ಆಯಿಲ್​​ ಟ್ಯಾಂಕ್​ನಲ್ಲಿ ಬಿದ್ದು ಯುವಕನೊಬ್ಬ ಸಾವನ್ನಪ್ಪಿದ್ದಾನೆ.

Abhishek Gowdagere
ಅಭಿಷೇಕ ಗೌಡಗೇರಿ (ETV Bharat)
author img

By ETV Bharat Karnataka Team

Published : Nov 30, 2024, 10:54 PM IST

ಹಾವೇರಿ : ಡಾಂಬರ್ ಕಾಯಿಸಲು ಬಳಸುವ ಎಲ್​ಡಿಒ ಆಯಿಲ್ ಟ್ಯಾಂಕ್​ನಲ್ಲಿ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಕರಿ ಗ್ರಾಮದಲ್ಲಿ ನಡೆದಿದೆ.

ಮೃತ ಯುವಕನನ್ನ ಅಭಿಷೇಕ ಗೌಡಗೇರಿ (20) ಎಂದು ಗುರುತಿಸಲಾಗಿದೆ. ಅಭಿಷೇಕ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕಾಕೋಳ ತಾಂಡಾದ ನಿವಾಸಿ. ಆಯಿಲ್ ಟ್ಯಾಂಕ್​ನ ವಾಲ್​ನಲ್ಲಿ ಕಸ ಸಿಲುಕಿದೆ. ಅದನ್ನ ತೆಗೆಯಲು ಮುಂದಾಗಿ ಎರಡು ಕಾಲುಗಳನ್ನ ಟ್ಯಾಂಕ್ ಒಳಗೆ ಬಿಟ್ಟಿದ್ದಾನೆ. ಈ ವೇಳೆ ಕಾಲು ಜಾರಿ ಬಿದ್ದು ಯುವಕ ಸಾವನ್ನಪ್ಪಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ತನಿಖೆ ಕೈಗೊಂಡಿದ್ದು, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಮೃತ ಯುವಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಸ್ಥಳೀಯರು, ಸಂಬಂಧಿಕರು ಒತ್ತಾಯಿಸಿದ್ದಾರೆ. ಈ ರೀತಿ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಗುತ್ತಿಗೆದಾರನಿಗೆ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ : ಉಡುಪಿ : ಹಿಟ್ ಆ್ಯಂಡ್ ರನ್, ಬೈಕಿಗೆ ಡಿಕ್ಕಿ ಹೊಡೆದ ಜೀಪ್; ಸವಾರ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.