ಚಿಕ್ಕಮಗಳೂರು ಜನತೆಗೆ ಕೇಂದ್ರ, ರಾಜ್ಯ ಸರ್ಕಾರದಿಂದ ದೀಪಾವಳಿ ಗಿಫ್ಟ್.. ಏನ್ ಗೊತ್ತಾ? - ಮೆಡಿಕಲ್ ಕಾಲೇಜಿಗೆ ಮಂಜೂರಾತಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4858300-thumbnail-3x2-ckm.jpg)
ಚಿಕ್ಕಮಗಳೂರು: ಜಿಲ್ಲೆಯ ಜನತೆಗೆ ನರೇಂದ್ರ ಮೋದಿ ಸರ್ಕಾರ ಹಾಗೂ ರಾಜ್ಯದ ಸಿಎಂ ಬಿ.ಎಸ್.ಯಡ್ಡಿಯೂರಪ್ಪನವರ ಸರ್ಕಾರ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವದ ಉಡುಗೊರೆ ನೀಡಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ. ಬಹು ದಿನದ ಕನಸು ನನಸಾಗುವ ದಿನ ಹತ್ತಿರ ಬಂದಿದ್ದು, ಮೆಡಿಕಲ್ ಕಾಲೇಜಿಗೆ ಮಂಜೂರಾತಿ ದೊರೆತಿದೆ. 325 ಕೋಟಿ ರೂ. ವೆಚ್ಚದಲ್ಲಿ ಶೀಘ್ರದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಲಾಗುವುದು. ನನೆಗುದಿಗೆ ಬಿದ್ದಿದ್ದ ಎಂಜಿನಿಯರಿಂಗ್ ಕಾಲೇಜಿನ ಕಟ್ಟಡ ಕೆಲಸವನ್ನು 58 ಕೋಟಿ ರೂ. ವೆಚ್ಚದಲ್ಲಿ ಅತಿ ಶೀಘ್ರದಲ್ಲಿ ಕಾರ್ಯರಂಭ ಮಾಡಲಾಗುವುದು ಎಂದರು. ಇನ್ನೂ ಮೂರು ಕೆಲಸ ಬಾಕಿ ಇದ್ದು, ಜಲಧಾರೆ ಯೋಜನೆ, ಭಾರೀ ನೀರಾವರಿ ಯೋಜನೆಯಲ್ಲಿ ಕೆರೆ ತುಂಬಿಸುವ ಯೋಜನೆ, ಮಿಲ್ಕ್ ಯೂನಿಯನ್ ಯೋಜನೆಗಳಿಗೆ ಸಂಕ್ರಾತಿ ಹಾಗೂ ಯುಗಾದಿ ಹಬ್ಬದ ಒಳಗೆ ಕೆಲಸ ಪ್ರಾರಂಭ ಮಾಡಲಾಗುವುದು ಎಂದು ಹೇಳಿದ್ರು.