ಜಿಲ್ಲಾ ವಾರ್ಷಿಕ ಪೊಲೀಸ್ ಕ್ರೀಡಾಕೂಟ.. - ದಾವಣಗೆರೆ ಜಿಲ್ಲಾ ವಾರ್ಷಿಕ ಪೊಲೀಸ್ ಕ್ರೀಡಾಕೂಟ ಸುದ್ದಿ
🎬 Watch Now: Feature Video
ದಾವಣಗೆರೆ:ನಗರದ ಪೊಲೀಸ್ ಕವಾಯತ್ ಮೈದಾನ, ಹೈಸ್ಕೂಲ್ ಮೈದಾನದಲ್ಲಿ ಮೂರು ದಿನಗಳ ಕಾಲ ಜಿಲ್ಲಾ ವಾರ್ಷಿಕ ಪೊಲೀಸ್ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು. ಕಬ್ಬಡ್ಡಿ, ಶಟಲ್ ಕಾಕ್, ಕ್ರಿಕೆಟ್ ಸೇರಿ ಅಥ್ಲೇಟಿಕ್ಸ್ ಕ್ರೀಡಾಕೂಟಗಳು ನಡೆದವು. ಜೊತೆಗೆ ಮಾಧ್ಯಮ ಹಾಗೂ ಪೊಲೀಸ್ ಕ್ರಿಕೆಟ್ ತಂಡಗಳ ನಡುವೆ ಅಫೀಶಿಯಲ್ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಬುಧವಾರ ಸಂಜೆ ಸಮಾರೋಪ ಸಮಾರಂಭದಲ್ಲಿ ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕರಾದ ಅಮ್ರಿತ್ ಪಾಲ್ ಹಾಗೂ ಎಸ್ಪಿ ಹನುಮಂತರಾಯ ವಿಜಯಶಾಲಿಗಳಿಗೆ ಬಹುಮಾನ ವಿತರಿಸಿದರು. ಈ ವೇಳೆ ಮಾತನಾಡಿದ ಎಸ್ಪಿ ಹನುಮಂತರಾಯ, ಸದಾ ಒತ್ತಡದ ಬದುಕನ್ನು ನಿಭಾಯಿಸುವ ಪೊಲೀಸರು, ಮೂರು ದಿನಗಳ ಕಾಲ ಕ್ರೀಡೆಯಲ್ಲಿ ಭಾಗವಹಿಸಿದ್ರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಎಂದರು.