ಬರ್ತ್‌ಡೇ ಪಾರ್ಟಿ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ : ಎಸ್​ಪಿ ಹೀಗಂತಾರೆ..

By

Published : Mar 24, 2021, 7:57 PM IST

thumbnail
ಧಾರವಾಡ: ಬರ್ತ್‌ಡೇ ಪಾರ್ಟಿಯಲ್ಲಿ ರಿವಾಲ್ವರ್​​ನಿಂದ ಗುಂಡು ಹಾರಿಸಿ ಶುಭ ಕೋರಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್ 30 ಮತ್ತು ಐಪಿಸಿ 285 ಅಡಿ ಕೇಸ್ ದಾಖಲಿಸಿದ್ದೇವೆ ಎಂದು ಧಾರವಾಡ ಎಸ್​ಪಿ ಪಿ ಕೃಷ್ಣಕಾಂತ್‌ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ್ತ್‌ಡೇ ಇದ್ದ ವ್ಯಕ್ತಿ ಹಾಗೂ ಫೈರಿಂಗ್ ಮಾಡಿದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಓಪನ್ ಫೈರ್ ಮಾಡಿದ ವ್ಯಕ್ತಿ ಬಳಿ 2011ರಿಂದ ರಿವಾಲ್ವರ್ ಲೈಸೆನ್ಸ್ ಇದೆ. ಸದ್ಯ ಲೈಸೆನ್ಸ್ ರದ್ದು ಮಾಡಿದ್ದೇವೆ ಎಂದು ಎಸ್​ಪಿ ಸ್ಪಷ್ಟಪಡಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.